ನವದೆಹಲಿ: ಹಲವಾರು ಮುಷ್ಕರ, ಗಲಭೆ ಹಾಗು ಮಾತುಕತೆಗಳ ನಂತರವೂ ಕೃಷಿ ಕಾಯ್ದೆಯಲ್ಲಿ ಯಾವುದೇ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪದಿದ್ದರೆ ಇಂದು ರೈತರು ಕ್ರೋಧ ಗೊಂಡಿದ್ದಾರೆ. ಹಾಗೂ ಮುಷ್ಕರವನ್ನು ಇನ್ನು ತೀವ್ರ ಸ್ವರೂಪದಲ್ಲಿ ಮಾಡಲು ನಿಶ್ಚಯಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಸರಿಯಾಗಿ ರೈತರ ನಾಯಕ ಬೂಟಾ ಸಿಂಗ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.
“ಡಿಸೆಂಬರ್ 10 ರವರೆಗೆ ನಾವು ಒಂದು ಗಡಿಯನ್ನು ನೀಡುತ್ತೇವೆ, ಪ್ರಧಾನಿ ನಮ್ಮ ಮಾತನ್ನು ಕೇಳದಿದ್ದರೆ ಮತ್ತು ಕಾನೂನುಗಳನ್ನು ರದ್ದುಗೊಳಿಸದಿದ್ದರೆ, ನಾವು ರೈಲ್ವೆ ಹಳಿಗಳನ್ನು ನಿರ್ಬಂಧಿಸುತ್ತೇವೆ. ಇದರಿಂದ ಇಡೀ ದೇಶದ ಜನರಿಗೂ ತೊಂದರೆಯಾಗಬಹುದು. ಮತ್ತು ಅವರ ಬೆಂಬಲವನ್ನು ಆಶಿಸುತ್ತೇವೆ. ಸನ್ಯುಕ್ಟ್ ಕಿಸಾನ್ ಮಂಚ್ ದಿನಾಂಕವನ್ನು ನಿಗದಿಪಡಿಸಿ ಘೋಷಿಸುತ್ತಾರೆ” ಎಚ್ಚರಿಕೆಯ ಮಾತುಗಳನ್ನು ಆಡಿದ ರೈತ ನಾಯಕ ಬೂಟಾ ಸಿಂಗ್.