ರಾಜಸ್ಥಾನ: ರಾಜಸ್ಥಾನದ ಕೋಟ ಆಸ್ಪತ್ರೆಯಲ್ಲಿ, 24ಗಂಟೆಯೊಳಗೆ ಹುಟ್ಟಿದ ಒಂದರಿಂದ ಐದು ದಿನಗಳ ಒಳಗಿನ ಒಂಬತ್ತು ನವಜಾತ ಶಿಶುಗಳು ಸಾವನ್ನಪ್ಪಿದೆ.
ಈ ಕುರಿತು ಕಟ್ಟೆಚ್ಚರಕ್ಕೆ ನೀಡಿರುವ ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮ, “ಎಳೆ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹಾಗೂ ಆರೈಕೆ ನೀಡಬೇಕಾಗಿರುವುದು ಆಸ್ಪತ್ರೆಗಳ ಕರ್ತವ್ಯ. ಆದರೆ ಈ ರೀತಿಯ ನಿರ್ಲಕ್ಷ್ಯ ತೋರಿದ್ದಕ್ಕೆ ಆಸ್ಪತ್ರೆಯ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಬಹುದು” ಎಂದರು.
ನವಜಾತ ಶಿಶುಗಳ ಸಾವಿನ ಘಟನೆಯ ಕುರಿತು ಮುಕ್ತವಾಗಿ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಕೋಟ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.