ಪಂಜಾಬ್: ಕೊರೋನಾ ಕಾರಣಕ್ಕಾಗಿ ದೇಶಾದ್ಯಂತ ಹಲವು ಬಗೆಯ ಕರ್ಫ್ಯೂ ಗಳನ್ನು ವಿಧಿಸಲಾಗಿತ್ತು. ಹಾಗೆಯೇ ಕೆಲಕಾಲದ ನಂತರ ಅದನ್ನು ತೆಗೆಯಲಾಯಿತು. ಆದರೆ ಪಂಜಾಬ್ನಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ವಿಸ್ತರಿಸಲಾಗಿದೆ.
ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ರಾಜ್ಯವ್ಯಾಪಿ ರಾತ್ರಿ ಕರ್ಫ್ಯೂ ಅನ್ನು ಜಾರಿಗೊಳಿಸುವ ಬಗ್ಗೆ ತಿಳಿಸಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ವಿಸ್ತರಿಸಲು ಆದೇಶಿಸಿದ್ದಾರೆ ಮತ್ತು ಮುಂಬರುವ ಜನವರಿ 1 ರವರೆಗೆ ಕೂಟಗಳಲ್ಲಿ ಭಾಗವಹಿಸುವವರ ಸಂಖ್ಯೆಗೂ ತಡೆ ಹಾಕಿದ್ದಾರೆ. ಮನೆಯೊಳಗಿನ ಕಾರ್ಯಕ್ರಮಗಳಿಗೆ ಗರಿಷ್ಠ 100 ಜನರು ಮತ್ತು ಹೊರಗಡೆಯ ಸಮಾರಂಭಗಳಿಗೆ 250 ಜನರ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅವರು ರಾಜ್ಯ ಪೊಲೀಸರನ್ನು ಕೇಳಿದರು ಎಂದು ಸಿಎಂಒ ತಿಳಿಸಿದೆ.