ಬೆಂಗಳೂರು: ವೈಟ್ಫೀಲ್ಡ್ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಶ್ವಿನಿ ಎಂಬಾಕೆ ಸಹೋದ್ಯೊಗಿಗಳು ಸ್ನಾನ ಮಾಡುವ ದೃಶ್ಯ ಸೆರೆ ಹಿಡಿದು ಪ್ರಿಯಕರನಿಗೆ ಕಳು ಹಿಸುತ್ತಿದ್ದ ವಿಷಯ ಬಯಲಾಗಿದ್ದು ಅವಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ನಿಂಗಾಗಿ ಶೋಧ ನಡೆಯುತ್ತಿದೆ.
ಹಾಸ್ಟೆಲ್ ಮೇಲ್ವಿಚಾರಕಿ ನೀಡಿದ ದೂರಿನ ಮೇರೆಗೆ ಆರೋಪಿ ಅಶ್ವಿನಿ ಎಂಬಾಕೆಯನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆ ಆಡಳಿತ ಮಂಡಳಿ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುವ ನರ್ಸ್ಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿದ್ದು, ಆ ನರ್ಸ್ ಗಳಲ್ಲಿ ಈಕೆಯೂ ಒಬ್ಬಳಾಗಿದ್ದಳು. ಡಿ.5ರ ಸಂಜೆ 6.45ರಲ್ಲಿ ನರ್ಸ್ ಸ್ನಾನ ಮಾಡಲು ಸಂತ್ರಸ್ತೆ ನರ್ಸ್ ಶೌಚಗೃಹಕ್ಕೆ ಹೋದಾಗ ಅದರಲ್ಲಿ ಮೊಬೈಲ್ ಬಚ್ಚಿಟ್ಟಿರುವುದು ಕಣ್ಣಿಗೆ ಬಿದ್ದಿದೆ.
ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಟ್ಫೀಲ್ಡ್ನ ಖಾಸಗಿ ಆಸ್ಪತ್ರೆಯಲ್ಲಿ ಅಶ್ವಿನಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆ ಆಡಳಿತ ಮಂಡಳಿ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುವ ನರ್ಸ್ಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿತ್ತು. ಅದರಲ್ಲಿ ಅಶ್ವಿನಿ ಸೇರಿ ಹಲವಾರು ನರ್ಸ್ಗಳು ನೆಲೆಸಿದ್ದರು. ಡಿ.5ರ ಸಂಜೆ 6.45ರಲ್ಲಿ ನರ್ಸ್ ಸ್ನಾನ ಮಾಡಲು ಸಂತ್ರಸ್ತೆ ನರ್ಸ್ ಶೌಚಗೃಹಕ್ಕೆ ಹೋದಾಗ ಅದರಲ್ಲಿ ಮೊಬೈಲ್ ಬಚ್ಚಿಟ್ಟಿರುವುದು ಕಣ್ಣಿಗೆ ಬಿದ್ದಿದೆ.
ಗಾಬರಿಗೊಂಡ ನರ್ಸ್, ಬಟ್ಟೆ ಧರಿಸಿ ಮೊಬೈಲ್ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ವಿಡಿಯೋ ರೆಕಾರ್ಡ್ ಆಗುತ್ತಿರುವುದು ತಿಳಿದಿತ್ತು. ನಂತರ ಮೊಬೈಲ್ ಗ್ಯಾಲರಿಯ ಫೋಟೋಗಳನ್ನು ಪರಿಶೀಲಿಸಿದಾಗ ಅದರಲ್ಲಿ ಇಂತಹದೇ ಇತರ ವಿಡಿಯೋಗಳು ಇರುವುದನ್ನು ಗಮನಿಸಿದ ನರ್ಸ್ ತಕ್ಷಣವೇ ಮೊಬೈಲ್ ನನ್ನ ಹಾಸ್ಟೆಲ್ ಮೇಲ್ವಿಚಾರಕಿಗೆ ನೀಡಿ ದೂರು ನೀಡಿದ್ದಾರೆ.
ಅಶ್ವಿನಿ ಜತೆಗೆ ಇನ್ನೂ ಕೆಲವರು ಕೈ ಜೋಡಿಸಿರುವುದು ಬೆಳಕಿಗೆ ಬಂದಿದ್ದು, ಸದ್ಯ ವಶದಲ್ಲಿರುವ ಅಶ್ವಿನಿ ಅನ್ನು ವಿಚಾರಣೆ ನಡೆಸಿದಾಗ ವಿಡಿಯೋಗಳನ್ನು ಪ್ರಿಯಕರನಿಗೆ ಕಳುಹಿಸುತ್ತಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ವೈಟ್ಫೀಲ್ಡ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.