ಜಮ್ಮು ಕಾಶ್ಮೀರ: ಇತ್ತೀಚೆಗೆ ಉಗ್ರರ ದಾಳಿ ಹೆಚ್ಚಾಗಿದ್ದು, ಇಂದು ಪೀಪಲ್ ಡೆಮೋಕ್ರಟಿಕ್ ಪಕ್ಷದ (ಪಿಡಿಪಿ) ನಾಯಕನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಉಗ್ರ ದಾಳಿಗೆ ಖಾಸಗಿ ಭದ್ರತಾ ಅಧಿಕಾರಿ ಇಬ್ಬರು ಬಲಿಯಾಗಿದ್ದಾರೆ.
ಸೋಮವಾರ ಬೆಳಗ್ಗೆ ನಡೆದ ಉಗ್ರರು ಶ್ರೀನಗರದ ನಾಟಿಪೋರಾ ಪ್ರದೇಶದಲ್ಲಿ ಪಿಎಸ್ ಒ ಮೇಲೆ ದಾಳಿ ನಡೆಸಿದ್ದು, ಅಹ್ಮದ್ ಅವರು ಗಾಯಗೊಂಡರು. ಘಟನೆ ನಡೆದ ಕೂಡಲೇ ಅಹ್ಮದ್ ಅವರನ್ನು ಆಸ್ಪತ್ರೆಗೆ ಸೇರಿಸಲಾದರೂ, ಅವರ ಸ್ಥಿತಿ ಗಂಭೀರವಾಗಿತ್ತು ಆದ್ದರಿಂದ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪೊಲೀಸರು ತಿಳಿಸಿದರು.
ಈ ಘಟನೆಯ ನಂತರ ನಾಟಿಪೋರಾ ಪ್ರದೇಶವನ್ನು ಸಂಪೂರ್ಣವಾಗಿ ಭದ್ರತಾ ಪಡೆ ಸುತ್ತುವರಿದಿದ್ದು, ಉಗ್ರರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.