ಲಂಡನ್: ಇಂಗ್ಲೆಂಡ್ನಲ್ಲಿ ಹೊಸದಾದ ಕೊರೊನಾ ವೈರಸ್ನ ಪ್ರಬೇಧವೊಂದು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದೆ.
ಈ ಹೊಸ ಪ್ರಭೇದದ ವೈರಸ್ ಗೆ ಸಂಬಂಧಿಸಿದಂತೆ ಈಗಾಗಲೇ 1000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದೃಡಪಟ್ಟಿವೆ ಎಂದು ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ಸೋಮವಾರ ತಿಳಿಸಿದ್ದಾರೆ.
ಇತ್ತೀಚೆಗೆ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ದೇಶದ ದಕ್ಷಿಣ ಭಾಗದಲ್ಲಿ ಈ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
‘ಹೊಸ ಕೊರೊನಾ ವೈರಸ್ ಅನ್ನು ನಾವು ಪತ್ತೆ ಮಾಡಿದ್ದು, ಇದು ದಕ್ಷಿಣ ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಂದು ಹ್ಯಾನ್ಕಾಕ್ ಹೇಳಿದ್ದಾರೆ.
ಈಗಿರುವ ಕೊರೊನಾ ವೈರಸ್ಗಿಂತಲೂ, ರೂಪಾಂತರಗೊಂಡಿರುವ ಈ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ ಎಂಬ ಮಾಹಿತಿ ಅಧ್ಯಯನದಿಂದ ಲಭ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹೊಸ ಮಾದರಿಯ ಕೊರೊನಾ ವೈರಸ್ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಬಹುದು ಏನು ನಿಖರವಾಗಿ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.