ಟೋಕಿಯೋ: 30 ವರ್ಷದ ತಕಾಹಿರೊ ಶಿರೈಶಿ ಅಲಿಯಾಸ್ ಟ್ವಿಟರ್ ಕಿಲ್ಲರ್ ಎಂದು ಕುಖ್ಯಾತಿ ಪಡೆದಿದ್ದ ಯುವಕನನ್ನು ಇಂದು ಟೋಕಿಯೋ ನ್ಯಾಯಾಲಯ ಮರಣದಂದನೆ ಶಿಕ್ಷೆ ವಿಧಿಸಿದೆ.
ಟ್ವಿಟರ್ ಕಿಲ್ಲರ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಪಡೆದ ಈತ ಮೊದಮೊದಲು ಜನರೊಂದಿಗೆ ಸ್ನೇಹವನ್ನು ಬೆಳೆಸಿ, ನಂತರ ಅವರನ್ನು ಭಯಭೀತರನ್ನಾಗಿ ಮಾಡಿ ಕೊಲ್ಲುತ್ತಿದ್ದ ಇಂವ ಅಪಾದನೆ ಮೇಲೆಗೆ ಬಂಧಿಸಲಾಗಿತ್ತು. ಆ ಆಪಾದನೆಯನ್ನು ಅವನೇ ಸ್ವತಹ ಒಪ್ಪಿಕೊಂಡಿದ್ದು ಆತನ ಮುಖ್ಯ ಗುರಿಗಳು 15 ರಿಂದ 26 ವರ್ಷದೊಳಗಿನ ಜನರು ಎಂದು ಹೇಳಿಕೊಂಡಿದ್ದಾನೆ. ಇಷ್ಟೇ ಅಲ್ಲದೆ ಈ ವರೆಗೆ 9 ಜನರನ್ನು ಕೊಲೆ ಮಾಡಿರುವುದು ಸಾಬೀತಾಗಿದ್ದು, ಈತನಿಗೆ ತೊಕ್ಯೋ ನ್ಯಾಯಾಲಯ ಮರಣದಂಡನೆ ವಿಧಿಸಿದೆ.