ನವದೆಹಲಿ: ಪಂಜಾಬ್ನ ಅಟಾರಿ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಇಬ್ಬರು ಒಳನುಸುಳುಕೊರರನ್ನ ಬುಧವಾರ ತಡರಾತ್ರಿ ಹತ್ಯೆ ಮಾಡಿದೆ.
ಭದ್ರತಾ ಪಡೆಗಳು ಹತ್ಯೆಗೀಡಾದ ಒಳನುಸುಳುವವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದು, ಮುಂಜಾನೆ 2. 30 ರ ಸುಮಾರಿಗೆ ಅಟಾರಿ ಮುಂಭಾಗದಲ್ಲಿ ಶಸ್ತ್ರಸಜ್ಜಿತ ಒಳನುಸುಳುವವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಟಾರಿಯ ರಾಜತಾಲ್ ಪ್ರದೇಶದಲ್ಲಿ ಈ ಎನ್ಕೌಂಟರ್ ನಡೆಸಿದ್ದು, ಶೋಧಕಾರ್ಯ ಮುಂದುವರೆದಿದೆ. ಆದರೆ ದಟ್ಟವಾದ ಮಂಜು ಈ ಪ್ರದೇಶವನ್ನು ಆವರಿಸಿದೆ ಎಂದು ಮೂಲಗಳು ತಿಳಿಸಿವೆ.