ವರಣಸಿ: ಓಎಲ್ಎಕ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರಣಸಿ ಕಚೇರಿಯನ್ನೇ ಮಾರಲು ಇಟ್ಟ ಪ್ರಕರಣ ವಾರಣಾಸಿಯಲ್ಲಿ ನಡೆದಿದೆ.
ನಾಲ್ವರು ವ್ಯಕ್ತಿಗಳು ಮೋದಿ ಅವರ ಕಚೇರಿಯ ಫೋಟೋ ತೆಗೆದು 7.5 ಕೋಟಿ ರೂಪಾಯಿ ಗೇ ಮಾರಾಟಕ್ಕಿದೆ ಎಂದು ಓಎಲ್ಎಕ್ಸ್ ನಲ್ಲಿ ಹಾಕಿದ್ದರು. ಅಷ್ಟೇ ಅಲ್ಲದೆ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಾರಾಣಸಿಯ ಕಚೇರಿ ಮಾರಾಟಕ್ಕಿದೆ. ನಾಲ್ಕು ರೂಮ್ಗಳು, ನಾಲ್ಕು ಬಾತ್ರೂಂಗಳು, 6500 ಚದರಡಿ ಕಾರ್ಪೆಟ್ ಪ್ರದೇಶವನ್ನು ಒಳಗೊಂಡಿದೆ ಎಂದು ಬರೆದಿದ್ದರು.
ಆರೋಪಿಗಳನ್ನು ಪೊಲೀಸರು ಇದೀಗ ಬಂಧಿಸಿದ್ದು ಅವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಈಗ ಓಎಲ್ಎಕ್ಸ್ ನಲ್ಲಿ ಹಾಕಿದ ಫೋಟೋ ಹಾಗೂ ಜಾಹೀರಾತನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.