ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅಪ್ ಗಳ ಮೂಲಕ ಸುಲಭವಾಗಿ ಸಾಲಗಳು ದೊರೆಯುವುದರ ಬಗ್ಗೆ ಕೇಳಿಬರುತ್ತಿದೆ. ಆದರೆ ಅದರಿಂದಾಗುವ ತೊಂದರೆಗಳ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ತೆಲಂಗಾಣದಲ್ಲಿ ಮೂವರು ವ್ಯಕ್ತಿಗಳು ಮೊಬೈಲ್ ಆಪ್ ಮೂಲಕ ಸಾಲ ಪಡೆದು ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಕೊರೋನಾ ಸಮಯದಲ್ಲಿ ಕೆಲಸ ಹೋದ ಕರಣ ಹಣಕಾಸಿನ ಸಮಸ್ಯೆಯಿಂದ ಮೊಬೈಲ್ ಮೂಲಕ ಸಾಲವನ್ನು ಪಡೆದು ಹಿಂತಿರುಗಿಸುವಂತೆ ಕಿರುಕುಳಗಳು ಹಾಗೂ ಅಶ್ಲೀಲ ಮಾತುಗಳು ಕೇಳಿಬಂದ ಕಾರಣ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಪ್ ಮೂಲಕ ಪಡೆದ ಸಾಲ ಪಾವತಿಸದಿದ್ದರೆ ಸಾಲ ಪಡೆದವರು ಹಾಗೂ ಅವರ ಕುಟುಂಬಸ್ಥರು ಈ ರೀತಿಯ ಮಾನಸಿಕ ಕಿರುಕುಳಕ್ಕೆ ಒಳಗಾಗಬೇಕಾಗುತ್ತದೆ. ಹೌದು, ಸಾಲ ಹಿಂತಿರುಗಿಸಿದೆ ಇದ್ದ ಕಾರಣ ಒಂದೇ ಸಮನೆ ಕರೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾದ ಕವನಗಳು ಅವರತ್ತ ಬರುತ್ತಲೇ ಇರುತ್ತವೆ. ಆ ವ್ಯಕ್ತಿಗೆ ಮಾತ್ರವಲ್ಲದೆ ಅವರ ಕುಟುಂಬಸ್ಥರಿಗೆ ಅಪರಿಚಿತ ಕರೆಗಳ ಕಿರುಕುಳ ಎದುರಿಸಬೇಕಾಗುತ್ತದೆ.
ಇಂತಹದೆ ಕಿರುಕುಳವನ್ನು ತಾಳಲಾಗದೆ ಅಂತಿಮವಾಗಿ ಸುನಿಲ್ ಕಿಸ್ಮತ್ ಅನ್ನುವವರು ತಮ್ಮ ಮನೆಯಲ್ಲಿ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹದೇ ಘಟನೆ ಇನ್ನೂ ಎರಡು ಸಂಭವಿಸಿದ್ದು ಒಟ್ಟು ಒಂದೇ ವಾರದಲ್ಲಿ ಈ ಕಾರಣದಿಂದ ಮೂವರ ಬಲಿಯಾಗಿದೆ.
ಆತ್ಮಹತ್ಯೆ ಕುರಿತಾದ ಪ್ರಕರಣವನ್ನು ಪ್ರಚೋದನಾ ಆತ್ಮಹತ್ಯೆ ಎಂದು ಪೊಲೀಸರು ದಾಖಲಿಸಿಕೊಂಡಿದ್ದು, ಪ್ರಚೋದಿಸಿದವರ ವಿರುದ್ಧ ತನಿಖೆ ಆರಂಭಗೊಂಡಿದೆ.