ನವದೆಹಲಿ: ಕೇವಲ 24 ಗಂಟೆಗಳಲ್ಲಿ 341 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲದೆ 26624 ಮಂದಿಗೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ 19 ಸೋಂಕಿಗೆ ಬಲಿಯಾದವರ ಸಂಖ್ಯೆ 341 ತಲುಪಿದ್ದು, ಒಟ್ಟು ಇವರಿಗೆ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆ 1,45,477 ಆಗಿದೆ. ಹಾಗೆಯೇ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿದ್ದು, 1,00,31,223ಕ್ಕೆ ಏರಿದ.
ದೇಶದ ಆರೋಗ್ಯ ಇಲಾಖೆ ತಿಳಿಸಿರುವ ಪ್ರಕಾರ ಈ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 95,80,402 ಆಗಿದೆ. ಇನ್ನು 305,345 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಒಂದೇ ದಿನದಲ್ಲಿ 29690 ಜನ ಗುಣಮುಖರಾಗಿರುವ ಸಮಾಧಾನಕರ ವಿಷಯವಾಗಿದೆ.