ಮುಂಬೈ: ಗುಜರಾತ್ ನ ಜಾಮ್ ನಗರದಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣವಾಗಲಿದ್ದು, ಇದು ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಕನಸಿನ ಯೋಜನೆ ಎಂದು ಹೇಳಲಾಗುತ್ತಿದೆ.
ರಿಲಯನ್ಸ್ ಸಂಸ್ಥೆ ಮೃಗಾಲಯದ ನಿರ್ಮಾಣಕ್ಕೆ ಮುಂದಾಗಿದ್ದು, 280 ಎಕರೆಯ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಮೃಗಾಲಯ, ಜಾಮ್ ನಗರದಲ್ಲಿ ರಿಲಯನ್ಸ್ ಸಂಸ್ಥೆ ತೈಲ ಶುದ್ಧೀಕರಣ ಘಟಕ ಹೊಂದಿದ್ದು ಅದರ ಸಮೀಪದಲ್ಲಿಯೇ ಇದಕ್ಕೆ ಜಾಗದ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಮೃಗಾಲಯದಲ್ಲಿ ನೂರಕ್ಕೂ ಹೆಚ್ಚು ವಿವಿಧ ಜಾತಿಯ ಪ್ರಾಣಿಗಳು, ಪಕ್ಷಿಗಳು ಹಾಗೂ ಹಾವುಗಳನ್ನು ಇಲ್ಲಿ ಹಾಕಲಾಗುವುದು.