ಮಹಾರಾಷ್ಟ್ರ: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗೋಣಿಚೀಲದಲ್ಲಿ ತುಂಬಿಟ್ಟಿದ್ದ ಘಟನೆ ಮಹಾರಾಷ್ಟ್ರದ ತಲ್ವಾರ್ ಜಿಲ್ಲೆಯ ವೈಸಿ ಎಂಬಲ್ಲಿ ನಡೆದಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವ ನಾಲ್ಕು ವರ್ಷದ ಬಾಲಕಿಯನ್ನು ಪರಿಶೀಲಿಸಿದ ವೈದ್ಯರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಭಾನುವಾರ ವಾಸನ ಫಾದರ್ವಾಡಿ ಪ್ರದೇಶದಲ್ಲಿ ಗೋಣಿಚೀಲದಲ್ಲಿ ಏನು ಇರುವಂತೆ ತಿಳಿದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪರಿಶೀಲಿಸಿದ ನಂತರ ಗೋಣಿಚೀಲದೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಬಾಲಕಿ ಕಂಡುಬಂದಿತ್ತು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಆಕೆಯ ಮೇಲೆ ಎಸಗಿರುವ ದುಷ್ಕರ್ಮ ಬಯಲಾಗಿದ್ದು, ಈ ಸಂಬಂಧವಾಗಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ ಹಾಗೂ ತನಿಖೆಯನ್ನು ಮುಂದುವರಿಸಿದ್ದಾರೆ.