ನವದೆಹಲಿ: ಚುನಾವಣಾ ಆಯೋಗ ಹೊಸದೊಂದು ವಿಚಾರವನ್ನು ಹೊರಹಾಕಿದ್ದು, ಒಂದು ಮಿಷನ್, ಒನ್ ಎಲೆಕ್ಷನ್ ವ್ಯವಸ್ಥೆಯನ್ನು ಜಾರಿಗೊಳಿಸಲು ಭಾರತೀಯ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದೆ ಎಂದು ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿಕೆ ನೀಡಿದ್ದಾರೆ.
ಶಾಸಕಾಂಗದ ಎಲ್ಲಾ ಕಾನೂನಾತ್ಮಕ ತಿದ್ದುಪಡಿಗಳ ನಂತರ ಯೋಜನೆಯನ್ನು ಜಾರಿಗೊಳಿಸುವುದಾಗಿಯೂ, ಇದಕ್ಕೆ ಬೇಕಾದ ಸಿದ್ಧತೆಗಳು ಈಗಾಗಲೇ ಮಾಡಿರುವುದಾಗಿಯೂ ತಿಳಿಸಿದರು.
ದೇಶದಲ್ಲಿ ನಡೆಯುವಂತಹ ಚುನಾವಣೆಗಳು ಆ ದೇಶದ ಅಭಿವೃದ್ಧಿ ಕಾರ್ಯಗಳ ಮೇಲೆ ಮುಖ್ಯವಾಗಿ ಪರಿಣಾಮ ಬೀರುವುದರಿಂದ ಒನ್ ನೇಶನ್, ಒನ್ ಎಲೆಕ್ಷನ್ ವ್ಯವಸ್ಥೆ ಬಹಳ ಮುಖ್ಯವಾಗುತ್ತದೆ ಎಂದು ಪ್ರಧಾನಿ ಮೋದಿ ನವೆಂಬರ್ನಲ್ಲಿ ಮಾಡಿದ ಒಂದು ಭಾಷಣದಲ್ಲಿ ಹೇಳಿದ್ದರು. ಈ ವಿಚಾರವಾಗಿ ವಿರೋಧ ಪಕ್ಷಗಳು ಯಾವುದೇ ರೀತಿಯ ಬೆಂಬಲವನ್ನು ವ್ಯಕ್ತಪಡಿಸಿರಲಿಲ್ಲ.
ಈ ಹಿಂದೆಯೂ ಹಲವಾರು ಬಾರಿ ಈ ಬಗ್ಗೆ ಚರ್ಚೆಗಳು ಬಂದಿದ್ದು, ಅದರ ಬಗ್ಗೆ ಯಾವುದೇ ನಿರ್ಧಾರಗಳು ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. 2015ರಲ್ಲಿ ಈ. ಎಂ ಸುದರ್ಶನ ನಾಚಿಯಪ್ಪನ್ ನೇತೃತ್ವದಲ್ಲಿಈ ಯೋಜನೆ ಸಿದ್ಧವಾಗಿತ್ತು ಇದೀಗ ಕಾರ್ಯರೂಪಕ್ಕೆ ಬರುವ ಎಲ್ಲ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.