ಮುಂಬಯಿ: ರೂಪಾಂತರ ಹೊಂದುತ್ತಿರುವ ಕರೋನವೈರಸ್ ಸುದ್ದಿಯಿಂದ 7 ಲಕ್ಷ ಕೋಟಿ ರೂಪಾಯಿ ಇಳಿಕೆ ಕಂಡ ಶೇರುಮಾರುಕಟ್ಟೆ. ಕೇವಲ ಒಂದೇ ದಿನದಲ್ಲಿ ಸೆನೆಕ್ಸ್ ಪಟ್ಟಿಯ ಎಲ್ಲ ಷೇರುಗಳು ಕೂಡ ಕೆಂಪುಬಣ್ಣಕ್ಕೆ ತಿರುಗಿದ್ದು, 7ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಮಾರುಕಟ್ಟೆ ಅನುಭವಿಸಿತು.
ಈ ಬಗ್ಗೆ ಮಾತನಾಡಿರುವ ರಿಲಯನ್ಸ್ ಸೆಕ್ಯೂರಿಟೀಸ್ ಬಿನೋದ್ ಮೋದಿ, “ಇಂದು ಪ್ರಾದೇಶಿಕ ಮಾರುಕಟ್ಟೆಯಲ್ಲಿ ಷೇರು ಮಾರಾಟ ಪ್ರಮಾಣ ಹೆಚ್ಚಾಗಿದ್ದ ಪರಿಣಾಮ ಒಂದೇ ದಿನ ಏಳು ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಕರಗಿಹೋಗಿದೆ” ಎಂದು ಹೇಳಿದರು.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ 432.15 ಅಂಶ (3.14%) ಕುಸಿದು 13,328.40 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಹಾಗೆಯೇ ಮೂವತ್ತು ಷೇರುಗಳ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ಇಂದು 1,406.73 ಅಂಶ (3%) ಕುಸಿತ ಕಂಡು ದಿನದ ಅಂತ್ಯಕ್ಕೆ 45,553.96 ಅಂಶದಲ್ಲಿ ವಹಿವಾಟು ಮುಗಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂದು ಎಲ್ಲ ಷೇರುಗಳು ಕೂಡ ನಷ್ಟ ಅನುಭವಿಸಿದ್ದು, ಒಎನ್ಜಿಸಿಯ ಷೇರು ಮೌಲ್ಯ ಗರಿಷ್ಠ ಶೇಕಡ 9 ಕುಸಿತ ಕಂಡಿದೆ ಎಂದು ವರದಿಗಳು ತಿಳಿಸುತ್ತವೆ.