ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕಲಹ ಸಂಸಾರಿಕ ಕಲಹವಾಗಿ ತಿರುಗಿದೆ. ಬಿಜೆಪಿ ಸಂಸದರಾಗಿರುವ ಸೌಮಿತ್ರ ಖಾ ಅವರ ಪತ್ನಿ ಸುಜಾತ ಮಾಂಡಲ್ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಟಿ ಎಂ ಸಿ ಪಕ್ಷಕ್ಕೆ ಇಂದು ಬೆಳಗ್ಗೆ ಸೇರಿದರು.
ಆ ಸಮಯದಲ್ಲಿ ಸುಜಾತ ಮಾಂಡಲ್, “ಇಷ್ಟು ವರ್ಷ ಬಿಜೆಪಿ ಪಕ್ಷದಲ್ಲಿ ದುಡಿದಿದ್ದೇನೆ. ಆದರೆ ಸರಿಯಾದ ಗೌರವ ಸಿಕ್ಕಿರಲಿಲ್ಲ. ಇದೇ ಕಾರಣದಿಂದ ಬಿಜೆಪಿ ತೊರೆದು ಟಿಎಂಸಿ ಸೇರುತ್ತಿದ್ದೇನೆ ಎಂದು ಹೇಳಿದರು.
ಆದರೆ ಇದೀಗ ಸುಜಾತ ಮಾಂಡಲ್ ಅವರ ಪತಿ ಬಿಜೆಪಿ ಸಂಸದ ಸುಮಿತ್ರ ಖಾ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿಚ್ಛೇದನವನ್ನು ನೀಡುವುದಾಗಿ ಅದಕ್ಕೆ ಸಂಬಂಧಪಟ್ಟ ಪತ್ರಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ ತನ್ನ ಪತ್ನಿಯ ಈ ಕೃತ್ಯದಿಂದ ತನಗೆ ತೀವ್ರ ನೋವು ಹಾಗೂ ಅಗಾಧವಾಗಿದೆ. ಕಾಂಗ್ರೆಸ್ ಪಕ್ಷ ನಮ್ಮಿಬ್ಬರ ಹತ್ತು ವರ್ಷ ದಾಂಪತ್ಯ ಜೀವನವನ್ನು ನಾಶ ಮಾಡುತ್ತಿದೆ. ಇಂದಿನಿಂದ ನಾನು ಅವಳೊಂದಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ. ಸುಜಾತಾ ರಿಂದ ವಿಚ್ಛೇದನ ಪಡೆಯಲು ನೋಟಿಸ್ ಕಳಿಸುತ್ತೇನೆ ಎಂದು ಹೇಳಿದರು.