ನವದೆಹಲಿ: ಹೊಸ ವರ್ಷದಿಂದ ದೇಶದಲ್ಲೆಡೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ವಾರ ನಿಗದಿಪಡಿಸಬಹುದು. ಪ್ರಸ್ತುತ ಈ ಬೆಲೆಗಳನ್ನು ತಿಂಗಳ ಆಧಾರದ ಮೇಲೆ ನಿಗದಿಪಡಿಸಲಾಗಿತ್ತು. ಆದರೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನದ ಆಧಾರದ ಮೇಲೆ ಏರಿಳಿತ ಕಾಣುತ್ತಿರುವ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಇದರಿಂದಾಗಿ ತೈಲದ ಬೆಲೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಪೆಟ್ರೋಲಿಯಂ ಕಂಪನಿಗಳು ಇದನ್ನು ಪ್ರತಿದಿನ ಸುಲಭವಾಗಿ ಹೊಂದಿಸಿಕೊಳ್ಳುತ್ತವೆ. ಆದರೆ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಮಾಸಿಕ ಆಧಾರದ ಮೇಲೆ ನಿಗದಿಪಡಿಸುವುದರಿಂದ, ಕಂಪನಿಗಳು ಇಡೀ ತಿಂಗಳ ನಷ್ಟವನ್ನು ಭರಿಸಬೇಕಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸುತ್ತಾರೆ.
ತಜ್ಞರು ಹೇಳುವ ಪ್ರಕಾರ ಪೆಟ್ರೋಲಿಯಂ ಕಂಪನಿಗಳು ಸಹ ಬೆಲೆ ಹೆಚ್ಚಿಸುವ ಹೊಸ ನೀತಿಯನ್ನು ಜಾರಿಗೆ ತರಲು ಪ್ರಾರಂಭಿಸಿವೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಆದ್ದರಿಂದ ಡಿಸೆಂಬರ್ನಲ್ಲಿ ಎಲ್ಪಿಜಿ ಸಿಲಿಂಡರ್ನ ಬೆಲೆಗಳನ್ನು ಇದುವರೆಗೆ ಎರಡು ಬಾರಿ ಹೆಚ್ಚಿಸಲಾಗಿದೆ. ಆದರೆ ಪ್ರಕಟಣೆಯ ಕೊರತೆಯಿಂದಾಗಿ ಜನರು ಅದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ.