ನವದೆಹಲಿ : ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಹೇಳಿಕೆಯ ವಿಡಿಯೋ ಒಂದು ಜಗತ್ತಿನ ಗಮನ ಸೆಳೆದಿದೆ. ಘಝ್ವಾ ಏ ಹಹಿಂದ್ (ಭಾರತದ ವಿರುದ್ಧ ಧರ್ಮಯುದ್ಧ) ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ಅಖ್ತರ್, ಮೊದಲು ಕಾಶ್ಮೀರವನ್ನು ವಶಪಡಿಸ್ತೇವೆ ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಎಂದು ಬಹಿರಂಗವಾಗಿಯೆ ಘೋಷಿಸಿದ್ದಾರೆ.
ಸಮಾ ಟಿವಿ ಚಾನೆಲ್ಗೆ ರಾವಲ್ಪಿಂಡಿ ಎಕ್ಸ್ಪ್ರೆಸ್ ಎಂದೇ ಖ್ಯಾತರಾಗಿರುವ ಅಖ್ತರ್ ಹಿಂದೊಮ್ಮೆ ನೀಡಿದ್ದ ಸಂದರ್ಶನ ತುಣುಕು ವಿಡಿಯೋ ದೃಶ್ಯದಲ್ಲಿರುವಂಥದ್ದು, ಇದೀಗ ವೈರಲ್ ಆಗಿದೆ.
ಉಜ್ಬೇಕಿಸ್ತಾನ್ನಿಂದಲೂ ವಿವಿಧ ಶಕ್ತಿಗಳು ನಮ್ಮೊಡನೆ ಕೈ ಜೋಡಿಸಲಿವೆ. ಇವೆಲ್ಲವೂ ಖೊರಾಸಾನ್ ಅನ್ನು ಉಲ್ಲೇಖಿಸುತ್ತಿದ್ದು, ಐತಿಹಾಸಿಕ ಪ್ರದೇಶ ಲಾಹೋರ್ ತನಕ ವಿಸ್ತರಿಸಲ್ಪಡಲಿದೆ. ನಮ್ಮ ಸೇನೆ ಅಫ್ಘಾನಿಸ್ತಾನದಿಂದ ಅಟಾಕ್ ತನಕ ತಲುಪಲಿದ್ದು, ಅಟಾಕ್ನಲ್ಲಿರುವ ನದಿಯಲ್ಲಿ ಎರಡು ಬಾರಿ ರಕ್ತ ಪ್ರವಾಹವೇ ಹರಿಯಲಿದೆ ಎಂದು ಹೇಳಿದ್ದಾರೆ.
ಘಝ್ವಾ-ಏ-ಹಿಂದ್ ಪದವನ್ನು ಮೂಲಭೂತವಾದಿ ಇಸ್ಲಾಮಿಕ್ ಧರ್ಮ ಬೋಧಕರು ಪಾಕಿಸ್ತಾನದಲ್ಲಿ ಹೆಚ್ಚಾಗಿ ಬಳಸುತ್ತಿದ್ದಾರೆ. ಇದನ್ನೇ ಪಾಕಿಸ್ತಾನ ಪ್ರಾಯೋಜಿತ ಉಗ್ರ ಸಂಘಟನೆಗಳೂ ಬಳಸುತ್ತಿವೆ. ಈ ಪರಿಕಲ್ಪನೆಯ ಪ್ರಕಾರ, ಸಿರಿಯಾದಿಂದ ಈ ಯುದ್ಧ ಆರಂಭವಾಗಿ ಕಪ್ಪು ಬಾವುಟ ಹಿಡಿದ ಶಕ್ತಿ ಭಾರತವನ್ನು ಅತಿಕ್ರಮಿಸಲಿದೆ.
ಅಖ್ತರ್ಗೆ ಭಾರಿ ಸಂಖ್ಯೆಯ ಫಾಲೋಯರ್ಸ್ ಇದ್ದು, ಅವರ ಈ ಪೋಸ್ಟ್ ವ್ಯಾಪಕ ವಿವಾದ ಸೃಷ್ಟಿಸಿದೆ. ಪರ – ವಿರೋಧದ ಟೀಕೆಗಳು ವ್ಯಕ್ತವಾಗಿವೆ.