ಚೆನ್ನೈ: ತನ್ನ ಎಂಟು ವರ್ಷದ ಮಗಳಿಗೆ ಆಹಾರ ಕೊಡಲಾಗದೆ ಬೇಸತ್ತ ಬೆಂಗಳೂರು ಮೂಲದ ವೈದ್ಯರೊಬ್ಬರು ಮಗಳಿಗೆ ವಿಷವುಣಿಸಿದ ಆಘಾತಕಾರಿ ಘಟನೆ ಶುಕ್ರವಾರ ತಮಿಳುನಾಡಿನ ಅವಿನಾಶಿಯಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
ಮಗಳಿಗೆ ವಿಷವುಣಿಸಿದ ಬಳಿಕ ಆರೋಪಿ ಡಾ. ಶೈಲಜಾ ಬಸ್ ನಿಲ್ದಾಣಗಳಲ್ಲಿ ಅಲೆದಾಡುತ್ತಿದ್ದರು ಕಂಡುಬಂದಿದ್ದು, ಅವರನ್ನು ಅವಿನಾಶನ ಆಸ್ಪತ್ರೆಗೆ ದಾಖಲಿಸಲಾಗಿದೆ. 39 ವರ್ಷದ ಶೈಲಜಾ ನಡೆಸುತ್ತಿದ್ದ ಕ್ಲಿನಿಕ್ ಕೊರೋನಾ ಹಾಗೂ ಇನ್ನಿತರ ಕೆಲಕಾರಣಗಳಿಂದ ತಿಂಗಳ ಹಿಂದೆ ಮುಚ್ಚಲ್ಪಟ್ಟಿತ್ತು. ಆ ಬಳಿಕ ಅವರು ಅವರ ತಂದೆಯ ಪಿಂಚಣಿ ಹಣದ ಮೇಲೆ ಬದುಕುತ್ತಿದ್ದರು ಎಂದು ಹೇಳಲಾಗಿದ್ದು, ಆಕೆ ತುಂಬಾ ಖಿನ್ನತೆಗೆ ಒಳಗಾಗಿದ್ದರು ಎಂದು ಸ್ಥಳೀಯರು ತಿಳಿಸಿದರು. ಈ ಕಾರಣದಿಂದಲೇ ಆಕೆ ತನ್ನ ಮಗಳನ್ನು ಕೊಲ್ಲಲು ಮುಂದಾದಳು ಎಂದು ಹೇಳಲಾಗುತ್ತದೆ.
ಪ್ರಸ್ತುತ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ ಶೈಲಜ ಅವರನ್ನು ವಿಚಾರಿಸಿದ ಪೊಲೀಸರು ಅವರ ಮನಸ್ಥಿತಿಯ ಬಗ್ಗೆ ಅರಿತು ಅವರನ್ನು ಚಿಕಿತ್ಸೆಗಾಗಿ ಅವನಾಶಿನಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.