ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಕೆಲ ದಿನವರೆಗೆ ರಾಹುಲ್ ಗಾಂಧಿ ದೇಶದ ಹೊರಗಿರಲಿದ್ದಾರೆ ಎಂದಷ್ಟೇ ಪಕ್ಷದ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.
ಆದರೆ ರಾಹುಲ್ ಗಾಂಧಿ ಎಲ್ಲಿಗೆ ತೆರಳಿದ್ದಾರೆ ಎಂದು ಪ್ರಶ್ನಿಸಿದಾಗಲೂ ಸುರ್ಜೇವಾಲಾ ಯಾವುದೇ ಮಾಹಿತಿ ಹೊರಹಾಕಿಲ್ಲ. ಹಾಗಾಗಿ ರಣದೀಪ್ ನಡೆ ಕೊಂಚ ಅನುಮಾನಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ, ರಾಹುಲ್ ಅಜ್ಜಿ ಇಟಲಿಯಲ್ಲಿ ನೆಲೆಸಿದ್ದು, ಅವರನ್ನು ನೋಡಲು ಬೆಳಿಗ್ಗೆ ಖತಾರ್ ಏರ್ವೇಸ್ ವಿಮಾನದ ಮೂಲಕ ಇಟಲಿಯ ಮಿಲನ್ಗೆ ತೆರಳಿದ್ದಾರೆ. ಈ ಹಿಂದೆಯೂ ಅಲ್ಲಿಗೆ ರಾಹುಲ್ ಗಾಂಧಿಗೆ ಭೇಟಿ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.