ನವದೆಹಲಿ: ಬ್ರಿಟನ್ ನಿಂದ ಹಿಂತಿರುಗಿರುವ ಆರು ಮಂದಿಯಲ್ಲಿ ಕೊರೋನಾದ ಹೊಸ ಸೋಂಕು ಕಾಣಿಸಿಕೊಂಡಿದೆ ಎಂದು ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದರು.
ಬ್ರಿಟನ್ ನಿಂದ ಹಿಂತಿರುಗಿದವರಲ್ಲಿ ಆರು ಮಂದಿಗೆ ಕೊರೋನಾದ ಹೊಸ ರೂಪದ ಸೋಂಕು ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಮೂರು ಮಂದಿ, ಹೈದರಾಬಾದ್ ನ ಸಿಸಿಎಂಬಿಯ ಎರಡು ಮತ್ತು ಪುಣೆಯ ಎನ್ ಐವಿಯಲ್ಲಿ ಒಬ್ಬರಲ್ಲಿ ಕೊರೋನಾದ ಹೊಸ ಸೋಂಕು ಕಂಡುಬಂದಿದೆ ಎಂದು ಅವರು ತಿಳಿಸಿದರು.
ಇವರೆಲ್ಲರನ್ನು ಐಸೋಲೇಷನ್ ನಲ್ಲಿ ಇಡಲಾಗಿದೆ. ಇವರೊಂದಿಗೆ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.