ಪುಣೆ: ಟಿಂಡರ್ ಆಪ್ ನಿಂದ ಪರಿಚಯದ ವ್ಯಕ್ತಿಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಅತ್ಯಾಚಾರಕ್ಕೊಳಗಾದ 26 ವರ್ಷದ ಗಗನಸಖಿ ಆ ವ್ಯಕ್ತಿಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಎಫ್ಐಆರ್ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ ಟಿಂಡರ್ ಮೂಲಕ ಇವರಿಬ್ಬರು ಭೇಟಿಯಾದರು. ಆರೋಪಿ, ಅಭಿಜೀತ್ ವಾಘ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಹೋಟೆಲ್ಗೆ ಊಟಕ್ಕೆಂದು ಆಹ್ವಾನಿಸಿ, ಮದ್ಯ ಸೇವಿಸುವಂತೆ ಒತ್ತಾಯಿಸಿದನು. ನಂತರ ಅವನು ಅವಳನ್ನು ತನ್ನ ಮನೆಗೆ ಕರೆದೊಯ್ದು ಹಲ್ಲೆ ಮಾಡಿ ಅತ್ಯಾಚಾರ ಮಾಡಿದನೆಂದು ಆರೋಪಿಸಲಾಗಿದೆ.