ನವದೆಹಲಿ: ದೇಶದಲ್ಲಿ ಕೊರೋನಾ ರೋಪಾಂತರ ಸೋಂಕಿಗೆ ಒಳಗಾಗಿರುವವರ ಸಂಖ್ಯೆಯು 25ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.
ಈಗ ಎಲ್ಲಾ 25 ಮಂದಿಯನ್ನು ಕೂಡ ಐಸೋಲೇಷನ್ ನಲ್ಲಿ ಇಡಲಾಗಿದೆ. ಇವರೆಲ್ಲರೂ ಬ್ರಿಟನ್ ನಿಂದ ಹಿಂತಿರುಗಿರುವವರು ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.
ಪುಣೆಯಲ್ಲಿ ನಾಲ್ಕು, ದೆಹಲಿಯ ಜಿಐಬಿಯಲ್ಲಿ ಒಂದು ಹೊಸ ಸೋಂಕಿನ ಪ್ರಕರಣ ಪತ್ತೆಯಾಗಿದೆ ಎಂದು ಇಲಾಖೆಯು ಮಾಹಿತಿ ನೀಡಿದೆ.