ನವದೆಹಲಿ : ಕೆಲದಿನಗಳಿಂದ ದೇಶದಲ್ಲಿ ಕೊರಮ ಸೋಂಕಿನ ಪ್ರಕರಣಗಳು ಕಡಿಮೆಯಾಗಿತ್ತು ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಇದೀಗ ಮತ್ತೆ ಕೋರನ ಅಬ್ಬರ ಶುರುವಾಗಿದೆ ಎಂಬುದಕ್ಕೆ ಕಳೆದ 24 ಗಂಟೆ ಅವಧಿಯಲ್ಲಿ ದಾಖಲಾದ ವರದಿಗಳು ಸಾಕ್ಷಿಯಾಗಿವೆ.
ಕಳೆದ 24 ಗಂಟೆ ಅವಧಿಯಲ್ಲಿ 20,036 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ . ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,02.86,710 ಕ್ಕೆ ತಲುಪಿದೆ . ಅಷ್ಟೇ ಅಲ್ಲದೆ ಕೇವಲ 24 ಗಂಟೆಯಲ್ಲಿ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 256 ತಲುಪಿದ್ದು, ಇದುವರೆಗೆ 1 , 48 , 994 ಮಂದಿ ಈ ಮಾರಣಾಂತಿಕ ಕೊರೋನಾಗೆ ಬಲಿಯಾಗಿದ್ದಾರೆ.
ಇದುವರೆಗೂ ಕೊರೋನಾ ಸೋಂಕಿಗೆ ತುತ್ತಾಗಿದ್ದವರಲ್ಲಿ, 98,83 , 461 ಮಂದಿ ಸೋಂಕಿನಿಂದ ಮುಕ್ತಿ ಅಂದಿದ್ದು, ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 2 , 54 , 254 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸುತ್ತವೆ.