News Kannada
Sunday, February 05 2023

ದೇಶ-ವಿದೇಶ

ಮುಂಬೈದಾಳಿ ಯೋಜನೆಯ ಉಗ್ರನ ಬಂಧನ

Photo Credit :

ಮುಂಬೈದಾಳಿ ಯೋಜನೆಯ ಉಗ್ರನ ಬಂಧನ

ಪಾಕಿಸ್ತಾನ: ಮುಂಬೈ ದಾಳಿಯ ಯೋಜಕ, ಲಷ್ಕರ್ ಎ ತೊಯ್ಬಾದ ಕಮಾಂಡರ್​ ಜಕಿಯೂರ್ ರೆಹಮಾನ್ ಲಖ್ವಿ ನನ್ನು ಪಾಕಿಸ್ತಾನದಲ್ಲಿ ಇಂದು ಬಂಧಿಸಲಾಗಿದೆ.

ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದ ಲಖ್ವಿ, ಬಂದ ಹಣದಿಂದ ಉಗ್ರರಿಗಾಗಿ ಔಷಧಾಲಯ ನಡೆಸುತ್ತಿದ್ದ. ಈ ಬಗ್ಗೆ ಪಂಜಾಬ್​ ಕೌಂಟರ್​ ಟೆರರ್​ ಡಿಪಾರ್ಟ್​ಮೆಂಟ್​ ಲಾಹೋರ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲಷ್ಕರ್​ ಎ ತೊಯ್ಬಾದ ಕಾರ್ಯಾಚರಣೆಗಳ ಕಮಾಂಡರ್ ಆಗಿರುವ ಈತನನ್ನು ವಿಶ್ವಸಂಸ್ಥೆ, 2008ರಲ್ಲಿ ಮುಂಬೈ ದಾಳಿ ನಂತರ ಜಾಗತಿಕ ಉಗ್ರ ಎಂದು ಗುರುತಿಸಿದೆ.

ಆ ಬಳಿಕ 6 ವರ್ಷಗಳ ಕಾಲ ಪಾಕಿಸ್ತಾನದ ಜೈಲಿನಲ್ಲಿ ಇದ್ದ ಈತ 2015ರ ಏಪ್ರಿಲ್​ನಲ್ಲಿ ಬಿಡುಗಡೆಯಾಗಿದ್ದ. ಆದರೆ ಮತ್ತೆ ಈತನನ್ನು ಬಂಧಿಸಲಾಗಿದ್ದು, ಡಿಸೆಂಬರ್​ ಮೊದಲ ವಾರದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ನಿರ್ಬಂಧಗಳ ಸಮಿತಿ, ಜಕಿಯೂರ್ ರೆಹಮಾನ್ ಲಖ್ವಿಗೆ ಮಾಸಿಕ 1.5 ಲಕ್ಷ ರೂಪಾಯಿಯನ್ನು ಮೂಲಭೂತ ವೆಚ್ಚಗಳಿಗಾಗಿ ನೀಡಲು ಪಾಕ್​ ಸರ್ಕಾರಕ್ಕೆ ಅನುಮೋದನೆ ನೀಡಿತ್ತು. ಈ ಕಾರಣದಿಂದಾಗಿ ಪಾಕ್ ಮತ್ತೆ ಲಖ್ವಿ ನನ್ನು ಬಂಧಿಸಿದ್ದಾರೆ.

See also  ಬಿಹಾರದಲ್ಲಿ ಭಾರೀ ಮಳೆ: 18 ಮಂದಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು