ನವದೆಹಲಿ : ನೂತನ ಸಂಸತ್ ಭವನ ನಿರ್ಮಾಣಕ್ಕೆ ಇದ್ದ ಅಡೆತಡೆ ದೂರವಾಗಿದ್ದು, ಸೆಂಟ್ರಲ್ ವಿಸ್ತಾ ಯೋಜನೆಗೆ ಸುಪ್ರೀಂಕೋರ್ಟ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಹೊಸ ಸಂಸತ್ ಭವನ, ಕೇಂದ್ರೀಯ ಕಾರ್ಯದರ್ಶಿಗಳ ಕಟ್ಟಡ ಸೇರಿ ಹಲವು ಯೋಜನೆಯನ್ನು ರೂಪಿಸಲಾಗಿದೆ. 2019ರ ಸೆಪ್ಟೆಂಬರ್ ನಲ್ಲಿ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಘೋಷಣೆ ಮಾಡಲಾಗಿದೆ. 2020ರ ಡಿಸೆಂಬರ್ 10ರಂದು ಪ್ರಧಾನಿ ಮೋದಿ ಶಿಲಾನ್ಯಾಸ ಮಾಡಿ, ರೂ.971 ಕೋಟಿ ವೆಚ್ಚದ ಸಂಸತ್ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು. ನಂತರ ಕೆಲವು ಅಡೆತಡೆಗಳಿಂದ ಯೋಜನೆ ನಿಂತಂತಾಗಿತ್ತು.
ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ಪರಿಸರ ಇಲಾಖೆ ಒಪ್ಪಿಗೆಯನ್ನು ಎತ್ತಿ ತೋರಿಸುವ ಮೂಲಕ ಸೆಂಟ್ರಲ್ ವಿಸ್ತಾ ಯೋಜನೆಗೆ ಒಪ್ಪಿಗೆ ನೀಡಿದ್ದರಲ್ಲಿ ಸಮಸ್ಯೆ ಇಲ್ಲ ಎಂದು ಮಹತ್ವದ ತೀರ್ಪು ನೀಡಿದೆ.