ವಾಷಿಂಗ್ಟನ್: ಹಲವರು ಮಾತುಕತೆಗಳು ಹಾಗೂ ಪರ-ವಿರೋಧಗಳ ನಂತರ ಅಧಿಕಾರ ಹಸ್ತಾಂತರ ಗಳಿಸುವುದಕ್ಕೆ ಒಪ್ಪಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
ಗುರುವಾರ ಸೆನೆಟ್ ನಲ್ಲಿ ಮಾತನಾಡಿದ ಅವರು, ಜನವರಿ20ರಂದು ಕ್ರಮಬದ್ಧವಾಗಿ ಜೋ ಬೈಡೆನ್ ಗೆ ಅಧಿಕಾರ ಹಸ್ತಾಂತರಿಸುವುದಾಗಿ ತಿಳಿಸಿದರು. ನಂತರ ಮಾತನಾಡಿದ ಅವರು ಚುನಾವಣಾ ಫಲಿತಾಂಶವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ ಜನವರಿ20ರಂದು ಅಧಿಕಾರ ಹಸ್ತಾಂತರವನ್ನು ಮಾಡುವುದಾಗಿ ನಿರ್ಗಮ ಅಧ್ಯಕ್ಷ ಹೇಳಿದರು.
ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಮುಂದಿನ ಅಧ್ಯಕ್ಷರಾಗಿ ಜೋ ಬೈಡೆನ್ ಹಾಗೂ ಉಪಾಧ್ಯಕ್ಷರಾಗಿ ಕಮಲ ಹಾರಿಸ್ ಎಂದು ಔಪಚಾರಿಕವಾಗಿ ಘೋಷಿಸಲಾಗಿತ್ತು. ಇದೀಗ ಟ್ರೈನ್ ಅಧಿಕಾರ ವಹಿಸಿಕೊಳ್ಳಲು ಒಪ್ಪಿರುವ ಹಿನ್ನೆಲೆಯಲ್ಲಿ ಜನವರಿ 20ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರವನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ಸಮಾರಂಭ ಸರಳವಾಗಿ ಶ್ವೇತಭವನದಲ್ಲಿ ನಡೆಯುವುದು ಎಂದು ವರದಿಗಳು ತಿಳಿಸಿವೆ.