ನವದೆಹಲಿ: ಜುಲೈ 3 ರಂದು ಜಂಟಿ ಪ್ರವೇಶ ಪರೀಕ್ಷೆ (ಅಡ್ವಾನ್ಸ್ಡ್) 2021 ನಡೆಯಲಿದ್ದು, ಈ ಪರೀಕ್ಷೆಯನ್ನ ಐಐಟಿ ಖರಗ್ ಪುರ ನಡೆಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಪ್ರಕಟಿಸಿದ್ದಾರೆ.
ಸಚಿವ ಪೋಖ್ರಿಯಾಲ್ ತಮ್ಮ ಟ್ವಿಟರ್ ಮತ್ತು ಫೇಸ್ ಬುಕ್ ಪೇಜ್ʼಗಳ ಮೂಲಕ, “ಈ ವರ್ಷ 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ.75ಅಂಕ ಗಳಿಸುವ ಅರ್ಹತಾ ಮಾನದಂಡವನ್ನ ರದ್ದುಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇನ್ನು ಈ ವರ್ಷ, ಜೆಇಇ ಮೇನ್ ಫೆಬ್ರವರಿಯಿಂದ ಮೇವರೆಗೆ ನಾಲ್ಕು ಅಧಿವೇಶನಗಳಲ್ಲಿ ನಡೆಯಲಿದೆ. ಜೆಇಇ ಮೇನ್ ಪರೀಕ್ಷೆಯ ಅಂತಿಮ ಅಧಿವೇಶನದ ಫಲಿತಾಂಶಗಳನ್ನ ಪ್ರಕಟಿಸಿದ ನಂತರವಷ್ಟೇ ಜೆಇಇ ಅಡ್ವಾನ್ಸ್ಡ್ ನಡೆಯಲಿದೆ. ಇನ್ನು ಈ ಬಾರಿ ವಿದ್ಯಾರ್ಥಿಗಳು ಐ.ಐ.ಟಿ.ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಮಾನದಂಡದಲ್ಲಿ ಕೊಂಚ ಸಡಿಲಿಕೆ ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.