ಹೈದರಾಬಾದ್ : ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರ ಪರಿಚಯ ಮಾಡಿಕೊಂಡು ಸ್ನೇಹ ಸಂಪಾದಿಸಿದ ಬಳಿಕ ಅವರ ನಗ್ನ ಚಿತ್ರ ಪಡೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ಆರೋಪಿಯನ್ನು ಹೈದರಾಬಾದ್ ನ ರಚಕೊಂಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ .
ಬಂಧಿತ ಆರೋಪಿಯನ್ನು ತೋಪೆಟ್ಟಾ ಭಗವಾನ್ ಎಂದು ಗುರುತಿಸಲಾಗಿದ್ದು, ಆರೋಪಿಗೆ ಕೇವಲ 21 ವರ್ಷ ಎಂದು ತಿಳಿದು ಬಂದಿದೆ. ಆತ ವಾಟ್ಸಾಪ್ ಮೂಲಕ ಮೊದಲಿಗೆ ಅಪರಿಚಿತ ಮಹಿಳೆಯರ ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಆ ಮಹಿಳೆಯರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದ. ನಂತರ ಮಹಿಳೆಯನ್ನು ನಗ್ನಚಿತ್ರಕ್ಕಾಗಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ವಾಟ್ಸಪ್ ಚಾಟ್ ನಂತರ ಅವರ ಇನ್ಸ್ಟಾಗ್ರಾಮ್ ಅಕೌಂಟ್ಗಳನ್ನು ಹುಡುಕಿ ಅದರಿಂದ ಫೋಟೋಸ್ ಗಳನ್ನು ತೆಗೆದುಕೊಂಡು, ಮಹಿಳೆಯರಿಗೆ ಅರಿವೇ ಇಲ್ಲದಂತೆ ಅವರ ವಿಡಿಯೋ ಕಾಲ್ ಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಬಳಿಕ ನಗ್ನರಾಗಿ ವೀಡಿಯೋ ಕಾಲ್ ಮಾಡುವಂತೆ ಮಹಿಳೆಯನ್ನು ಬೆದರಿಸಿದ್ದ .
ಇದರಿಂದ ಹೆದರಿದ ಮಹಿಳೆ ಆರೋಪಿ ಹೇಳಿದ ರೀತಿ ನಗ್ನರಾಗಿ ವೀಡಿಯೋ ಕಾಲ್ ಮಾಡಿದ್ದರು . ಇದನ್ನು ಕೂಡ ಆರೋಪಿ ರೆಕಾರ್ಡ್ ಮಾಡಿಕೊಂಡಿದ್ದ . ಅಂತಿಮವಾಗಿ ಪೊಲೀಸರಿಗೆ ಮಹಿಳೆ ದೂರು ನೀಡಿದ ಪರಿಣಾಮ ಆರೋಪಿಯನ್ನು ಬಂಧಿಸಲಾಗಿದೆ ಹಾಗೂ ಆತನ ಮೇಲೆ ತನಿಖೆ ನಡೆಯುತ್ತಿದೆ.