ಭೋಪಾಲ್: ಊರಿನ ಜನರೆಲ್ಲಾ ಸೇರಿ ಎರಡು ನಾಯಿಗಳಿಗೆ ಮದುವೆ ಮಾಡಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಮಳೆ ಪೂಚಿಕಾರ್ಗುವಾ ಎಂಬ ಗ್ರಾಮದಲ್ಲಿ ನಡೆದಿದೆ.
ಮಳೆ ಬರಲಿ ಅಂತ ಕತ್ತೆಗಳಿಗೆ ಮದುವೆ ಮಾಡಿಸೋದು ಅಥವಾ ಕಪ್ಪೆಗಳಿಗೆ ಮದುವೆ ಮಾಡಿಸುವುದು ಸಹಜ. ಆದ್ರೆ ನಾಯಿಗಳಿಗೆ ಮದುವೆ ಮಾಡಿಸುವ ಬಗ್ಗೆ ಇದುವರೆಗೂ ಎಲ್ಲಿ ಕೇಳಿರಲಿಲ್ಲ. ಊರಿನ ಜನರು ಒಂದು ಹೆಣ್ಣುನಾಯಿ ಹಾಗೂ ಮತ್ತೊಂದು ಗಂಡುನಾಯಿಗೆ ಮದುವೆ ಮಾಡಿಸಿ, ಹಾಡಿ ಕುಣಿದು ಸಂಭ್ರಮಿಸಿದ್ದಾರೆ.
ಆ ಗ್ರಾಮದಲ್ಲಿ ಅನೇಕ ದಿನಗಳಿಂದ ನೀರಿನ ಅಭಾವ ಉಂಟಾಗಿದೆ. ಎರಡು ಮೂಕಪ್ರಾಣಿಗಳು ಮದುವೆಯಾದರೆ, ಇಂದ್ರ ದೇವನಿಗೆ ಸಂತೋಷವಾಗುತ್ತಾನೆ ಹಾಗೂ ಮಳೆ ನೀರನ್ನು ಸಮಸ್ಯೆಯನ್ನು ಬಗೆಹರಿಸುತ್ತನೆ ಎಂಬುದು ಈ ಗ್ರಾಮಸ್ಥರ ನಂಬಿಕೆ. ಆದ್ದರಿಂದ ಜನರು ಶ್ವಾನಗಳ ಮದುವೆ ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ಪುಚಿಕಾರ್ಗುವಾ ಗ್ರಾಮದ ನಿವಾಸಿ ಮೂಲ್ಚಂದ್ ನಾಯಕ್ ಅವರ ನಾಯಿ ರಶ್ಮಿಗೂ, ಉತ್ತರ ಪ್ರದೇಶದ ಬಕ್ವಾಖುರ್ದ್ ನಿವಾಸಿ ಅಶೋಕ್ ಯಾದವ್ ಅವರ ನಾಯಿ ಗೋಲುಗೂ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿ, 800 ಮಂದಿಗೆ ಭೋಜನ ಏರ್ಪಡಿಸಲಾಗಿತ್ತು. ನಾಯಿ ರಶ್ಮಿಗೆ ಮೂಲ್ಚಂದ್ ನಾಯಕ್ ಮತ್ತು ಅವರ ಕುಟುಂಬ ಕಣ್ಣಿರಿನ ಬೀಳ್ಕೊಡುಗೆ ಕೊಟ್ಟಿದೆ.
ಈ ಮದುವೆಯಿಂದ ನಮ್ಮ ಊರಿನ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಅಂತ ಗ್ರಾಮಸ್ಥರು ನಂಬಿದ್ದಾರೆ. ಗ್ರಾಮದಲ್ಲಿ ಕುಡಿಯಲು ಸಹ ನೀರಿಲ್ಲದಂತಾಗಿದೆ. ಮಹಿಳೆಯರು ದೂರದ ಪ್ರದೇಶಗಳಿಗೆ ಹೋಗಿ ಗಂಟೆಗಟ್ಟಲೆ ಕ್ಯೂ ನಿಂತು ನೀರು ತರುವಂತಾಗಿದೆ ಅಂತ ಅಶೋಕ್ ಯಾದವ್ ತಿಳಿಸಿದ್ದಾರೆ.