News Kannada
Tuesday, October 04 2022

ದೇಶ-ವಿದೇಶ

ದೆಹಲಿ ಹಿಂಸಾಚಾರದಲ್ಲಿ ಉಗ್ರರ ಪಾತ್ರವಿದೆ: ಪಂಜಾಬ್​ ಮುಖ್ಯಮಂತ್ರಿ - 1 min read

Photo Credit :

ದೆಹಲಿ ಹಿಂಸಾಚಾರದಲ್ಲಿ ಉಗ್ರರ ಪಾತ್ರವಿದೆ: ಪಂಜಾಬ್​ ಮುಖ್ಯಮಂತ್ರಿ

ಚಂಡೀಗಢ: ಹಿಂಸಾಚಾರದಲ್ಲಿ ರೈತರು ಭಾಗಿಯಾಗಿದ್ದಾರೆ ಎನ್ನುವುದನ್ನು ನಾನು ನಂಬುವುದಿಲ್ಲ. ತನಿಖಾ ಸಂಸ್ಥೆಗಳು ಸರಿಯಾಗಿ ತನಿಖೆ ನಡೆಸಿ, ಕೃತ್ಯ ನಡೆಸಿದವರಿಗೆ ಶಿಕ್ಷೆ ನೀಡಬೇಕು ಎಂದು ಕೃಷಿ ಹೋರಾಟದ ಸಮಯದಲ್ಲಿ ನಡೆದ ಹಿಂಸಾಚಾರ ಪ್ರಕ್ರಿಯೆಗಳಿಗೆ ಕೃಷಿಕರ ಕಾರಣ ಎಂಬುದನ್ನು ವಿರೋಧಿಸುವಂತೆ ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರ ಹೆಸರಿನಲ್ಲಿನ ಪ್ರತಿಭಟನೆ ಹಾಗೂ ಹಿಂಸಾಚಾರ, ಬಾಂಬ್​ಸ್ಫೋಟ ಎಲ್ಲವನ್ನೂ ತಾಳೆಹಾಕಿ ನೋಡಿದಾಗ ಇದರ ಹಿಂದಿರುವ ಶಕ್ತಿ ಯಾವುದು ಇರಬಹುದು ಎಂದು ಎಲ್ಲೆಡೆ ಲೆಕ್ಕಾಚಾರ ಶುರುವಾಗಿದೆ. ಈ ಕುರಿತಾಗಿ ಮಾತನಾಡಿದ ಅವರು, ಗಣರಾಜ್ಯೋತ್ಸದ ದಿನ ನಡೆದ ಘಟನೆ ಯಾವುದೇ ಭಾರತೀಯ ಹೆಮ್ಮೆಯಿಂದ ಹೇಳಿಕೊಳ್ಳುವಂಥದ್ದು ಅಲ್ಲ ಎಂದರು.

ಇಷ್ಟೇ ಅಲ್ಲದೆ, ರೈತರು ಪ್ರತಿಭಟನೆ ಶುರು ಮಾಡಿದ ಆರಂಭದಿಂದ ಅಂದರೆ ಅಕ್ಟೋಬರ್‌ ತಿಂಗಳಿನಿಂದಲೇ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳು ಬರುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ರೈತರ ಹೆಸರಿನಲ್ಲಿ ಉಗ್ರ ಶಕ್ತಿಗಳು ಹಿಂಸೆಯನ್ನು ಸೃಷ್ಟಿಮಾಡಲು ಹೊಂಚು ಹಾಕಿರುವ ಬಗ್ಗೆ ಕೇಂದ್ರವನ್ನು ಎಚ್ಚರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

See also  ಏರ್ ಇಂಡಿಯಾ ಕುರಿತು ಸರ್ಕಾರ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಪಿಯೂಷ್ ಗೋಯಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು