News Kannada
Monday, December 05 2022

ದೇಶ-ವಿದೇಶ

ಬಾಲ್ಯವಿವಾಹ ತಡೆಗಾಗಿ ರಾಜಸ್ಥಾನ ಸರಕಾರದಿಂದ ಹೊಸ ಆದೇಶ

Photo Credit :

ಬಾಲ್ಯವಿವಾಹ ತಡೆಗಾಗಿ ರಾಜಸ್ಥಾನ ಸರಕಾರದಿಂದ ಹೊಸ ಆದೇಶ

ಜೈಪುರ: ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ರಾಜಸ್ಥಾನ ಸರ್ಕಾರ ಕಟ್ಟುನಿಟ್ಟಿನ ಅದೇಶ ಹೊರಡಿಸಿದೆ. ಮದುವೆಯ ಆಹ್ವಾನ ಪತ್ರಿಕೆಯಲ್ಲಿ ವರ ಮತ್ತು ವಧುವಿನ ಹೆಸರನ್ನು ಪ್ರಕಟಿಸುವುದರ ಜೊತೆಗೆ ಅವರ ಜನ್ಮ ದಿನಾಂಕವನ್ನೂ ನಮೂದಿಸಬೇಕು ಎಂದು ಹೊಸ ಆದೇಶ ಸೂಚಿಸಿದೆ.

ಈ ಬಾರಿ ಮೇ 14ರಂದು ಅಕ್ಷಯ ತೃತೀಯಾ ಇದೆ. ಬಳಿಕ ಮೇ 26ರಂದು ಶುಕ್ಲ ಪೂರ್ಣಿಮೆ ಇದೆ. ಇವೆರಡು ಶುಭ ದಿನಗಳಾಗಿರುವ ಕಾರಣ ಹೆಚ್ಚಿನ ಮದುವೆ ಸಮಾರಂಭಗಳು ಈ ಸಂದರಭದಲ್ಲಿಯೇ ಜರುಗುತ್ತವೆ. ಈ ವೇಳೆ ಬಾಲ್ಯ ವಿವಾಹದ ಸಾಧ್ಯತೆಯೂ ಹೆಚ್ಚಿರುತ್ತದೆ. ಹೀಗಾಗಿ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.

ಬಾಲ್ಯ ವಿವಾಹ ಅಪರಾಧ ಎಂಬುದನ್ನು ಜನರು ಅರಿತಿರಬೇಕು. ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸುವಾಗ ಜನ್ಮದಿನಾಂಕ ಸರ್ಟಿಫಿಕೇಟ್‌ ನೀಡಬೇಕು. ಜನ್ಮದಿನಾಂಕವು ಲಗ್ನಪತ್ರಿಕೆಯಲ್ಲಿ ಕಡ್ಡಾಯವಾಗಿ ನಮೂದಾಗಿರಬೇಕು.

ಒಂದು ವೇಳೆ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ, ಕುಟುಂಬಸ್ಥರು, ಆಯೋಜಕರು, ಅಡುಗೆಭಟ್ಟರು, ಪುರೋಹಿತರು ಹಾಗೂ ಮದುವೆಯ ಅತಿಥಿಗಳೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಸರಕಾರದ ಹೊಸ ಆದೇಶದಲ್ಲಿ ತಿಳಿಸಲಾಗಿದೆ.

See also  ನೊಯ್ಡಾದಲ್ಲಿ ಜನವರಿ 31ರ ತನಕ ಸೆಕ್ಷನ್ 144 ಜಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು