News Kannada
Saturday, November 26 2022

ದೇಶ-ವಿದೇಶ

ಸೇನೆ ಹಿಂದಕ್ಕೆ ಪಡೆಯುವ ಬಗ್ಗೆ ಭಾರತ ಸಂತೋಷಪಡಬೇಕು: ಚೀನಾ - 1 min read

Photo Credit :

ಸೇನೆ ಹಿಂದಕ್ಕೆ ಪಡೆಯುವ ಬಗ್ಗೆ ಭಾರತ ಸಂತೋಷಪಡಬೇಕು: ಚೀನಾ

ಬೀಜಿಂಗ್‌: ‘ಪೂರ್ವ ಲಡಾಖ್‌ನ ಸಂಘರ್ಷ ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯು ಸಕಾರಾತ್ಮಕವಾಗಿ ನಡೆಯುತ್ತಿದೆ ಎಂಬ ವಿಷಯದ ಬಗ್ಗೆ ಭಾರತೀಯರು ಸಂತೋಷ ಪಡಬೇಕು’ ಎಂದು ಚೀನಾ ಸೇನೆಯು ಹೇಳಿದೆ. ಉಭಯ ದೇಶಗಳ ಸೇನೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಮುಂದುವರಿಸುವ ಸಂಬಂಧ ಭಾರತ ಮತ್ತು ಚೀನಾ ಸೇನೆಗಳ ಕಮಾಂಡರ್‌ಗಳ ಮಟ್ಟದ 11ನೇ ಸುತ್ತಿನ ಮಾತುಕತೆಯು ಶುಕ್ರವಾರ ನಡೆಯಿತು. ಆದರೆ ಈ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.
ಡೆಪ್‌ಸ್ಯಾಂಗ್‌, ಗೋಗ್ರಾ ಮತ್ತು ಹಾಟ್‌ಸ್ಟ್ರಿಂಗ್ಸ್‌ ಪ್ರದೇಶದಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಯಾವುದೇ ರೀತಿಯ ಘಟನೆಗಳು ನಡೆಯದಂತೆ ಸ್ಥಿರತೆಯನ್ನು ಕಾಪಾಡಲು ಉಭಯ ದೇಶಗಳು ಒಪ್ಪಿಕೊಂಡಿವೆ. ಜತೆಗೆ, ಬಾಕಿ ಇರುವ ವಿವಾದಾತ್ಮಕ ವಿಷಯಗಳನ್ನು ಶೀಘ್ರ ಇತ್ಯರ್ಥಪಡಿಸಿಕೊಳ್ಳಲು ಎರಡೂ ದೇಶಗಳ ಸೇನೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.‘ಚೀನಾದ ನಿಯೋಗದ ಅಧಿಕಾರಿಗಳು ‘ಪೂರ್ವನಿರ್ಧರಿತ ಮನಸ್ಥಿತಿ’ ಯೊಂದಿಗೆ ಮಾತುಕತೆಗೆ ಬಂದಿದ್ದರು. ಹಾಗಾಗಿ ತಮ್ಮ ನಿಲುವುಗಳಲ್ಲಿ ಅವರು ಸಡಿಲಿಕೆ ತೋರಲಿಲ್ಲ’ ಎಂದು ಭಾರತೀಯ ಸೇನೆ ಹೇಳಿದೆ. ಲಡಾಖ್‌ನ ಗಡಿ ಪ್ರದೇಶಗಳಲ್ಲಿ ಸಂಘರ್ಷ ಕಡಿಮೆಯಾಗುತ್ತಿದೆ. ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳಲಾಗುತ್ತಿದೆ. ಭಾರತವು ಈ ಸಕಾರಾತ್ಮಕ ಬೆಳವಣಿಗೆಯ ಬಗ್ಗೆ ಸಂತೋಷ ವ್ಯಕ್ತಪಡಿಸಬೇಕು. ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಭಾರತ ಕೊನೆವರೆಗೂ ಪಾಲಿಸಬೇಕು’ ಎಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹೇಳಿಕೆ ಬಿಡುಗಡೆ ಮಾಡಿದೆ.
ಈ ಬಗ್ಗೆ ಚೀನಾದ ಗ್ಲೋಬಲ್‌ ಟೆಲಿವಿಷನ್‌ ನೆಟ್‌ವರ್ಕ್‌(ಸಿಜಿಟಿಎನ್‌) ವರದಿ ಮಾಡಿದೆ.

See also  ಮಹಿಳೆಯರಿಗೆ ರಕ್ಷಣೆ ನೀಡಲು ಉ.ಪ್ರ. ಸರ್ಕಾರ ವಿಫಲ: ಪ್ರಿಯಾಂಕಾ ಗಾಂಧಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು