News Kannada
Tuesday, September 27 2022

ದೇಶ-ವಿದೇಶ

ಸಾವಿನಲ್ಲೂ ಕ್ರೂರ ಪತಿಗೆ ಕನಿಕರ ತೋರಿದ ಪತ್ನಿ! - 1 min read

Photo Credit :

ಸಾವಿನಲ್ಲೂ ಕ್ರೂರ ಪತಿಗೆ ಕನಿಕರ ತೋರಿದ ಪತ್ನಿ!

ಹೈದರಾಬಾದ್​: ಗಂಡನ ಕಿರುಕುಳ ತಾಳಲಾರದೇ ಮಹಿಳೆಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಹೈದರಾಬಾದ್​ನ ಬಂಜಾರ ಹಿಲ್ಸ್ ಬಳಿ ನಡೆದಿದ್ದು, ಡೆತ್​ನೋಟ್​ನಲ್ಲಿ ಗಂಡನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾಳೆ. ಮೃತಳನ್ನು ವಿಜಯಾ (31) ಎಂದು ಗುರುತಿಸಲಾಗಿದೆ. ವಿಜಯಾ ತನ್ನ ಪತಿ ಆಂಜನೇಯುಲು ಜತೆ ಹೈದರಾಬಾದ್​ನ ಯೂಸೂಫ್​ಗಢದ ರಾಜೀವ್​ಗಾಂಧಿ ನಗರದಲ್ಲಿ ವಾಸವಿದ್ದಳು. ಇಬ್ಬರು ಸಹ ಪ್ರೀತಿಸಿ 14 ವರ್ಷಗಳ ಹಿಂದೆ ಮದುವೆ ಆಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ವರಸೆ ಬದಲಿಸಿದಿ ಆಂಜನೇಯುಲು ಕಿರುಕುಳ ನೀಡಲು ಆರಂಭಿಸಿದ.
ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ. ಕೆಟ್ಟ ಕೆಟ್ಟ ಪದಗಳಿಂದ ನಿಂದಿನಿ ದಿನನಿತ್ಯವು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ವಿಜಯಾ ಏಪ್ರಿಲ್​ 27ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಮಗಳ ಸಾವಿಗೆ ಅಳಿಯನೇ ಕಾರಣ ಎಂದು ವಿಜಯಾಳ ತಾಯಿ ದೂರು ನೀಡಿದ್ದು, ಆಂಜನೇಯನನ್ನು ಬಂಧಿಸಲಾಗಿದೆ. ಏಪ್ರಿಲ್​ 26ರ ರಾತ್ರಿ ಮಗಳು ಕರೆ ಮಾಡಿದಳು. ಮಕ್ಕಳು ಜೋಪಾನ ಎಂದು ಅಳುತ್ತಾ ಮಾತನಾಡಿದಳು. ಈ ಮಧ್ಯೆ ಅಳಿಯ ಮಗಳ ಫೋನ್​ ಕಿತ್ತುಕೊಂಡು, ಮಗಳನ್ನು ಸಾಯಿಸುವುದಾಗಿ ಹೇಳಿದನು ಎಂದು ವಿಜಯಾ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಾಯುವ ಮುನ್ನ ವಿಜಯಾ ಡೆತ್​ನೋಟ್​ ಬರೆದಿಟ್ಟಿದ್ದು, “ನಾನು ವಿಜಯಾ… ನನ್ನ ಗಂಡನ ಕಿರುಕುಳ ತಾಳಲಾರದೇ ನಾನು ಸಾಯುತ್ತಿದ್ದೇನೆ. ಮದುವೆಯಾದಗಿನಿಂದ ಆತನೊಂದಿಗೆ ಪ್ರತಿದಿನ ಸಾಯುತ್ತಿದ್ದೆ. ಆತ ಬೇರೆ ಮಹಿಳೆಯೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಂದು ದೂರಿದ್ದಾಳೆ. ಆದರೆ, ಸಾಯುವಾಗಲೂ ಗಂಡನ ಬಗ್ಗೆ ಕನಿಕರ ತೋರಿವುದ ಪತ್ನಿ ನಾನು ಸತ್ತರೆ, ನನ್ನ ಗಂಡನನ್ನು ಸಾಯಿಸಬೇಡಿ ಎಂದು ಬರೆದಿಟ್ಟಿದ್ದಾಳೆ.

See also  ಅಫ್ಘಾನಿಸ್ತಾನದಲ್ಲಿ ಭಾರತೀಯ ನಾಗರಿಕನ ಅಪಹರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು