News Kannada
Wednesday, October 05 2022

ದೇಶ-ವಿದೇಶ

12 ವರ್ಷ ಮೇಲ್ಪಟ್ಟವರಿಗೂ ಫೈಜರ್ ಲಸಿಕೆ: ತುರ್ತು ಬಳಕೆಗೆ ಅಮೆರಿಕ ಅನುಮತಿ - 1 min read

Photo Credit :

12 ವರ್ಷ ಮೇಲ್ಪಟ್ಟವರಿಗೂ ಫೈಜರ್ ಲಸಿಕೆ: ತುರ್ತು ಬಳಕೆಗೆ ಅಮೆರಿಕ ಅನುಮತಿ

ವಾಷಿಂಗ್ಟನ್: 12 ವರ್ಷ ಮೇಲ್ಪಟ್ಟವರಿಗೆ ಫೈಜರ್–ಬಯೊಎನ್‌ಟೆಕ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮತಿ ನೀಡಿದೆ. 12–15 ವರ್ಷ ವಯಸ್ಸಿನವರಿಗೂ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡುವಂತೆ ಫೈಜರ್–ಬಯೊಎನ್‌ಟೆಕ್ ಅಮೆರಿಕ ಸರ್ಕಾರಕ್ಕೆ ಕಳೆದ ವಾರ ಮನವಿ ಸಲ್ಲಿಸಿತ್ತು.
ಲಸಿಕೆಯ ತುರ್ತು ಬಳಕೆಗೆ ಎಫ್‌ಡಿಎ (ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ) ಅನುಮತಿ ನೀಡಿದೆ. ಇದಕ್ಕಾಗಿ ಲಸಿಕೆ ಬಳಕೆಯ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಸಿಎನ್‌ಎನ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸದ್ಯ ಫೈಜರ್–ಬಯೊಎನ್‌ಟೆಕ್ ಕೋವಿಡ್‌ ಲಸಿಕೆಯನ್ನು 16 ವರ್ಷ ಮೇಲ್ಪಟ್ಟವರಿಗೆ ನೀಡಲು ಅಮೆರಿಕದಲ್ಲಿ ಅನುಮತಿ ಇದೆ. 12–15 ವರ್ಷ ವಯಸ್ಸಿನವರಿಗೂ ಲಸಿಕೆ ನೀಡಲು ಅನುಮತಿ ಕೋರಿ ಯುರೋಪ್‌ ಒಕ್ಕೂಟದ ಔಷಧ ನಿಯಂತ್ರಕರಿಗೂ ಕಂಪನಿ ಈಚೆಗೆ ಮನವಿ ಮಾಡಿತ್ತು.

See also  ಭಾರತದ ವಿದೇಶಾಂಗ ನೀತಿಯನ್ನು ಮೆಚ್ಚಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು