ಕನ್ನೌಜ್: ನಾಗ್ಲಾ ವಿಶುನಾ ಗ್ರಾಮದ ನಿವಾಸಿ ಅನುಜ್ ಇಟಾವಾ ಜಿಲ್ಲೆಯ ಯುವತಿಯೊಂದಿಗೆ ಪ್ರೇಮ ಪುರಾಣ ನಡೆಯುತ್ತಿತ್ತು. ಒಂದು ವರ್ಷದಿಂದ ಆಕೆಯನ್ನು ಪ್ರೀತಿಸಿದ್ದ ಅನುಜ್ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಮನೆಯಿಂದ ಯುವತಿಯನ್ನು ಓಡಿಸಿಕೊಂಡು ಹೋಗಿದ್ದಾನೆ. ಅಲ್ಲದೆ, ಆಕೆಯೊಂದಿಗೆ ದೈಹಿಕ ಸಂಬಂಧ ಸಹ ಬೆಳೆಸಿದ್ದಾನೆ. ಬಳಿಕ ಆಕೆಯನ್ನು ಒಂಟಿಯನ್ನಾಗಿಸಿ ಮನೆಗೆ ತೆರಳಿದ್ದಾನೆ.
ಇದರಿಂದ ನೊಂದ ಯುವತಿ ವಾಪಸ್ ಮನೆಗೆ ತೆರಳಿದ್ದು, ನಡೆದ ಘಟನೆ ಬಗ್ಗೆ ಹೇಳಿದ್ದಾಳೆ. ಕೂಡಲೇ ಯುವತಿ ಕುಟುಂಬಸ್ಥರು ಅನುಜ್ ಕುಟುಂಬಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಪೊಲೀಸರಿಗೆ ಹೆದರಿದ ಯುವಕನ ಕುಟುಂಬಸ್ಥರು ಮೂರು ದಿನದೊಳಗೆ ಮದುವೆ ಮಾಡುವುದಾಗಿ ಹೇಳಿದ್ದಾರೆ. ಮದುವೆಗೂ ಮುನ್ನ ಪ್ರಕರಣ ವಾಪಸ್ ತೆಗೆದುಕೊಳ್ಳುವಂತೆ ಷರತ್ತು ಹಾಕಿದ್ದಾರೆ. ಅದರಂತೆ ಯುವತಿ ಕುಟುಂಬಸ್ಥರು ಪ್ರಕರಣವನ್ನು ವಾಪಸ್ ಪಡೆದಿದ್ದರು. ಮೂರು ದಿನಗಳ ಬಳಿಕ ಅನುಜ್ ಮದುವೆಗೆ ತಯಾರಾಗದ ಹಿನ್ನೆಲೆ ಯುವತಿ ನ್ಯಾಯ ಕೇಳಲು ಲವರ್ ಮನೆಗೆ ತೆರಳಿದ್ದಾಳೆ. ಈ ವೇಳೆ ಅನುಜ್ ಕುಟುಂಬಸ್ಥರು ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಯುವತಿ ಪೊಲೀಸ್ ಠಾಣೆಗೆ ತೆರಳಿ ಅನುಜ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ಸಲ್ಲಿಸಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಅನುಜ್ ಮತ್ತು ಆತನ ಕುಟುಂಬಸ್ಥರು ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ.ಕಳೆದ ಐದು ದಿನಗಳಿಂದ ಯುವತಿ ತನ್ನ ಲವರ್ ಮನೆಯ ಮುಂದೆಯೇ ಧರಣಿ ನಡೆಸುತ್ತಿದ್ದಾಳೆ. ಪೊಲೀಸರು ನನಗೆ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ. ಗ್ರಾಮಸ್ಥರು ನನಗೆ ಊಟ, ಉಪಚಾರ ಮಾಡುತ್ತಿದ್ದಾರೆ ಎಂದು ನೊಂದ ಯುವತಿ ಮಾತಾಗಿದೆ.
ಕೈಕೊಟ್ಟ ಲವರ್ ಮನೆ ಮುಂದೆ ಐದು ದಿನಗಳಿಂದ ಧರಣಿ ಕುಳಿತ ಯುವತಿ!
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.