ನವದೆಹಲಿ: ಭಾರತೀಯ ವಾಯುಪಡೆಯ ಮಿಗ್-21 ವಿಮಾನವು ಪಂಜಾಬ್ನ ಮೊಗಾ ಬಳಿ ಶುಕ್ರವಾರ ನಸುಕಿನ ಜಾವ ಪತನಗೊಂಡಿರುವುದಾಗಿ ವಾಯುಸೇನಾಧಿಕಾರಿಗಳು ತಿಳಿಸಿದ್ದಾರೆ.ಪತನಕ್ಕೂ ಮುನ್ನ ಮಿಗ್-21 ವಿಮಾನದ ಪೈಲಟ್ ವಿಮಾನದಿಂದ ಹೊರಗೆ ಜಿಗಿದಿರುವುದಾಗಿ ಐಎಎಫ್ ಮೂಲಗಳು ತಿಳಿಸಿದ್ದು, ಶೋಧ ಕಾರ್ಯಾಚರಣೆ ಆರಂಭವಾಗಿರುವುದಾಗಿಯೂ ಮಾಹಿತಿ ನೀಡಿದೆ.
ಈ ಘಟನೆ ಗುರುವಾರ ಮಧ್ಯರಾತ್ರಿ ಹಾಗೂ ಶುಕ್ರವಾರ ನಸುಕಿನ ಜಾವ 1 ಗಂಟೆಗೆ ನಡೆದಿದೆ. ಮೊಗಾದ ಬಘುಪುರಾನಾ ವ್ಯಾಪ್ತಿಯಲ್ಲಿ ಬರು ಲ್ಯಾಂಗಿಯಾನಾ ಖುರ್ದ್ ಗ್ರಾಮದಲ್ಲಿ ಐಎಎಫ್ ವಿಮಾನ ಪತನಗೊಂಡಿದೆ.
ಪತನಗೊಂಡ ಸಂದರ್ಭದಲ್ಲಿ ಐಎಎಫ್ ವಿಮಾನವು ವಾಡಿಕೆಯ ತರಬೇತಿಯಲ್ಲಿತ್ತು. ಪತನಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ವಾಯುಪಡೆಯ ಮಿಗ್-21 ವಿಮಾನ ಪಂಜಾಬ್ ಬಳಿ ಪತನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.