ನವದೆಹಲಿ : ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಕಳೆದ ಒಂದು ತಿಂಗಳಿಂದ ವಿಧಿಸಿದ್ದ ಲಾಕ್ ಡೌನ್ ಪರಿಣಾಮವಾಗಿ ಕೊರೋನ ನಿಯಂತ್ರಣಕ್ಕೆ ಬಂದಿದೆ ಎಂದು ವರದಿಗಳು ತಿಳಿಸಿವೆ.
ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 956 ಪ್ರಕರಣ ಮಾತ್ರ ವರದಿಯಾಗಿದೆ . ಇದೇ ಅವಧಿಯಲ್ಲಿ 2380 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ . ಈ ಮೂಲಕ ಕಳೆದ ಒಂದು ತಿಂಗಳಿನಿಂದ ಜಾರಿಯಲ್ಲಿರುವ ಲಾಕ್ ಡೌನ್ ಕೊರೋನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ .
ಆದರೆ ಸಾವಿನ ಸಂಖ್ಯೆ ಈಗಲೂ ಹೆಚ್ಚಾಗಿದೆ . ಒಂದೇ ದಿನದಲ್ಲಿ 122 ಮಂದಿ ಕೊರೋನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ . ಸೋಮವಾರದಿಂದ ಲಾಕ್ ಡೌನ್ ನಿಯಮದಲ್ಲಿ ಹಂತ ಹಂತವಾಗಿ ಸಡಿಲಿಕೆ ಮಾಡುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ತಿಳಿಸಿದ್ದಾರೆ .