ಹೈದರಾಬಾದ್: ಪಾಲಕರು ಸ್ಮಾರ್ಟ್ ಫೋನ್ ತೆಗೆದುಕೊಡಲಿಲ್ಲವೆಂದು ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯ ದೊಮ ಮಂಡಲದ ದಿರ್ಸಂಪಲ್ಲಿ ಏರಿಯಾದಲ್ಲಿ ನಡೆದಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಾರ್ಗಮ್ ಗ್ರಾಮದ ಗುಲಾಮ್ ಮತ್ತು ಶಾಹಿನ್ ಮೂರು ವರ್ಷಗಳ ಹಿಂದೆಯೇ ವಿಕಾರಬಾದ್ಗೆ ಬಂದು ನೆಲೆಸಿದ್ದಾರೆ. ದಂಪತಿಗೆ ಓರ್ವ ಮಗ ಮತ್ತು ಶೇಕ್ ಮುಸ್ಕಾನ್ (17) ಎಂಬ ಹೆಣ್ಣು ಮಗಳಿದ್ದಾಳೆ.ಗುಲಾಮ್ ಮತ್ತು ಶಾಹೀನ್ ಪೌಲ್ಟ್ರಿ ಫಾರ್ಮ್ನಲ್ಲಿ ಕೆಲಸ ಮಾಡುತ್ತಿದ್ದರು. ಮೊಬೈಲ್ ಗೀಳಿಗೆ ಬಿದ್ದಿದ್ದ ಮುಸ್ಕಾನ್, ಮೊಬೈಲ್ ಕೊಡಿಸುವಂತೆ ಪಾಲಕರನ್ನು ಪೀಡಿಸುತ್ತಿದ್ದಳು. ಆದರೆ, ಪಾಲಕರು ನಿರಾಕರಿಸಿದ್ದರು. ಇದರಿಂದ ಮನನೊಂದ ಮುಸ್ಕಾನ್ ಪಾಲಕರು ಕೆಲಸಕ್ಕೆ ತೆರಳಿದಾಗ ಬುಧವಾರ ಮಧ್ಯಾಹ್ನ ಮನೆಯಲ್ಲೇ ಆತ್ಮಹತ್ಯೆ ಶರಣಾಗಿದ್ದಾಳೆ.
ಮೊಬೈಲ್ ಕೊಡಿಸದಿದ್ದಕ್ಕೆ ಯುವತಿ ಆತ್ಮಹತ್ಯೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.