News Kannada
Friday, December 02 2022

ದೇಶ-ವಿದೇಶ

ಬ್ಲ್ಯಾಕ್​ ಫಂಗಸ್​​ ಶೇಕಡ 150 ಹೆಚ್ಚಳ

Photo Credit :

ಬ್ಲ್ಯಾಕ್​ ಫಂಗಸ್​​ ಶೇಕಡ 150 ಹೆಚ್ಚಳ

ನವದೆಹಲಿ: ಕರೊನಾ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದರೂ, ಕಳೆದ ಮೂರು ವಾರಗಳಲ್ಲಿ ಕಪ್ಪು ಶಿಲೀಂಧ್ರ ಕೇಸ್​ಗಳ ಸಂಖ್ಯೆ ಶೇಕಡ 150 ಹೆಚ್ಚಳವಾಗಿದೆ. 31,216 ಮಂದಿ ಬ್ಲ್ಯಾಕ್​ ಫಂಗಸ್​​ ​ ಕಾಣಿಸಿಕೊಂಡಿದೆ. 2,109 ಜನರು ಮರಣಿಸಿರುವುದು ಕಳವಳ ಮೂಡಿಸಿದೆ.
ಸೋಂಕು ಹೆಚ್ಚಾಗಿರುವ ಕಾರಣ ಇದರ ಚಿಕಿತ್ಸೆಗೆ ಅಗತ್ಯವಿರುವ ಆ್ಯಂೋಟೆರಿಸಿನ್​ ಬಿ ಕೊರತೆ ಕಾಣಿಸಿಕೊಂಡಿದೆ. ಕಪ್ಪು ಶಿಲೀಂಧ್ರ ಸೋಂಕಿಗೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 7.057 ಜನ ಬಳಲಿದ್ದು, 609 ಜನ ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್​ನಲ್ಲಿ 5,418 ಕೇಸ್​, 323 ಸಾವು, ರಾಜಸ್ಥಾನದಲ್ಲಿ 2,976 ಕೇಸ್​ 150ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಉತ್ತರ ಪ್ರದೇಶದಲ್ಲಿ 1,744 ಕೇಸ್​, 142 ಸಾವು ಸಂಭವಿಸಿದೆ. ದೆಹಲಿಯಲ್ಲಿ 1,200 ಕೇಸ್​ 125 ಸಾವು ಸಂಭವಿಸಿದೆ.
ಅಮೆರಿಕ ದಲ್ಲಿ ಕೊವ್ಯಾಕ್ಸಿನ್​ ತುರ್ತುಬಳಕೆಗೆ ಅನುಮತಿ ಸಿಕ್ಕಿಲ್ಲ. ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್​ ಬಳಕೆಗೆ ಬಯಾಲಾಜಿಕ್ಸ್​ ಲೈಸೆನ್ಸ್​ ಅಪ್ಲಿಕೇಶನ್​ (ಬಿಎಲ್​ಎ) ಸಲ್ಲಿಸಿ ಅನುಮತಿ ಪಡೆಯುವಂತೆ ಅಮೆರಿಕದ ುಡ್​ ಆ್ಯಂಡ್​ ಡ್ರಗ್​ ಅಡ್ಮಿನಿಸ್ಟ್ರೆಶನ್​ ಸೂಚಿಸಿದೆ. ಅಮೆರಿಕದಲ್ಲಿ ಕೊವ್ಯಾಕ್ಸಿನ್​ ಅನ್ನು ಅಲ್ಲಿನ ಪಾಲುದಾರ ಕಂಪನಿ ಒಕುಜೆನ್​ ಮಾರ್ಕೆಟಿಂಗ್​ ಮಾಡುತ್ತಿದ್ದು ಈಗ ಬಿಎಲ್​ಎ ಮೂಲಕ ಪರವಾನಗಿ ಪಡೆಯಲು ಪ್ರಯತ್ನ ನಡೆಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ಜಗತ್ತಿಗೆ 100 ಕೋಟಿ ಲಸಿಕೆ ಪೂರೈಸುವುದಕ್ಕೆ ಜಿ&7 ರಾಷ್ಟ್ರಗಳು ಬದ್ಧತೆ ವ್ಯಕ್ತಪಡಿಸಿವೆ. ಇದರಲ್ಲಿ 50 ಕೋಟಿ ಲಸಿಕೆಯನ್ನು ಅಮೆರಿಕ, 10 ಕೋಟಿ ಲಸಿಕೆಯನ್ನು ಬ್ರಿಟನ್​ ಪೂರೈಸಲಿದೆ. ಇನ್ನು ಉಳಿದ ಲಸಿಕೆಯನ್ನು ಕೆನಡಾ, ಫ್ರಾನ್ಸ್​, ಜರ್ಮನಿ, ಇಟಲಿ ಮತ್ತು ಜಪಾನ್​ಗಳು ಪೂರೈಸಲಿವೆ.

See also  ಉಪ ಚುನಾವಣೆ ಮುಂದೂಡುವಂತೆ ಅನರ್ಹ ಶಾಸಕರು ಸುಪ್ರೀಂಗೆ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು