News Kannada
Friday, December 09 2022

ದೇಶ-ವಿದೇಶ

ಪಾಕಿಸ್ಥಾನದ ಮಾಜಿ ರಾಯಭಾರಿಯ ಮಗಳ ಹತ್ಯೆ

Photo Credit :

ಇಸ್ಲಮಾಬಾದ್ : ಪಾಕಿಸ್ಥಾನದಲ್ಲಿ ಮಾಜಿ ರಾಜತಾಂತ್ರಿಕರೊಬ್ಬರ ಮಗಳನ್ನು ಕೊಲೆ ಮಾಡಿರುವ ಕುರಿತು ವರದಿಯಾಗಿದೆ. ದಕ್ಷಿಣ ಕೊರಿಯ ಮತ್ತು ಕಜಖಿಸ್ತಾನದಲ್ಲಿ ಪಾಕಿಸ್ತಾನದ ರಾಯಭಾರಿ ​ ಆಗಿ ಕಾರ್ಯ ನಿರ್ವಹಿಸಿರುವ ಶೌಖತ್​ ಮುಕದಂ ಅವರ ಮಗಳಾದ ನೂರ್​ ಮುಕದಂ ಮೃತರಾಗಿದ್ದಾರೆ.
ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್​ನಲ್ಲಿ 27 ವರ್ಷದ ನೂರ್​ ಮುಕದಂರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಆಕೆಯ ಸ್ನೇಹಿತನೆನ್ನಲಾದ ಜಾಹಿರ್​ ಜಫ್ಫರ್​ ಎಂಬುವನನ್ನು ಕೃತ್ಯದ ಸ್ಥಳದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪಾಕಿಸ್ತಾನದಲ್ಲಿ ರಾಜತಾಂತ್ರಿಕರ ಮತ್ತು ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿರುವ ಸಮಯದಲ್ಲಿ ಈ ಅಪರಾಧ ಸಂಭವಿಸಿದೆ. ಜುಲೈ 16 ರಂದು ಅಫ್ಘಾನಿಸ್ತಾನದ ರಾಯಭಾರಿ ನಜೀಬುಲ್ಲ ಅಲಿಖಿಲ್ ಅವರ 26 ವರ್ಷದ ಮಗಳು ಸಿಲ್ಸಿಲಾ ಅಲಿಖಿಲ್​ ಎಂಬುವರನ್ನು ಇಸ್ಲಮಾಬಾದ್​​ನಲ್ಲಿ ಅಪಹರಿಸಿ, ಹಿಂಸೆ ನೀಡಲಾಗಿತ್ತು. ಈ ಘಟನೆಯ ಕುರಿತು ಅಫ್ಘಾನಿಸ್ತಾನ ಸರ್ಕಾರ ಪಾಕಿಸ್ಥಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡು ತನ್ನ ಸಿಬ್ಬಂದಿಗಳನ್ನು ವಾಪಸ್‌ ಕರೆಸಿಕೊಂಡಿತ್ತು.

See also  ತಾಲಿಬಾನಿಗಳ ಗುಂಡಿಗೆ ಈವರೆಗೆ ಬಲಿಯಾದವರೆಷ್ಟು ಗೊತ್ತಾ ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು