News Kannada
Monday, August 08 2022

ದೇಶ-ವಿದೇಶ

ಆಫ್ಘನ್ನರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ - 1 min read

ಅಫ್ಘಾನಿಸ್ತಾನ :   ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಲ್ಲಿರುವ ಆಫ್ಘನ್ನರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ನಾಲ್ಕು ಮಿಲಿಯನ್ ಆಫ್ಘನ್ನರು ಆಹಾರ ತುರ್ತುಪರಿಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಈ ಪೈಕಿ ಬಹುತೇಕರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಚಳಿಗಾಲದ ಗೋಧಿ ನೆಡುವಿಕೆ, ಜಾನುವಾರುಗಳಿಗೆ ಆಹಾರ ಮತ್ತು ದುರ್ಬಲ ಕುಟುಂಬಗಳಿಗೆ ನಗದು ಸಹಾಯ ಮಾಡಲು ಕನಿಷ್ಠ 36 ಮಿಲಿಯನ್ ಡಾಲರ್ ಅವಶ್ಯವಿದೆ.

ತಾಲಿಬಾನಿಗಳು ದೇಶವನ್ನು ವಶಪಡಿಸಿಕೊಂಡಾಗಿನಿಂದಲೂ ಆಫ್ಘನ್‌ನಲ್ಲಿ ಆರ್ಥಿಕ ಕೊರತೆ ಎದುರಾಗಿದೆ. ಇದೀಗ ಜಾಗತಿಕ ಸಹಾಯಗಳು ಸ್ಥಗಿತಗೊಂಡಿದೆ. ಬ್ಯಾಂಕ್ ಖಾತೆಗಳಿಂದ ಹಿಂಪಡೆಯಲು ದೈನಂದಿನ ಮಿತಿ ನಿಗದಿಪಡಿಸಲಾಗಿದೆ. ಜೊತೆಗೆ ತಾಲಿಬಾನಿ ಉಗ್ರರಿಗೆ ಸಂಬಳ ಕೂಡ ಬರುತ್ತಿಲ್ಲ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ. ತಾಲಿಬಾನಿಗಳನ್ನು ಇಸ್ಲಾಮಿಕ್ ಎಮಿರೇಟ್ ಎಂದು ಗುರುತಿಸಲು ಹೆಚ್ಚಿನ ದೇಶಗಳು ನಿರಾಕರಿಸಿರುವ ಕಾರಣ, ಹಣದ ಕೊರತೆಯಾಗಿದೆ.

ತಾಲಿಬಾನ್ ಸ್ವಾಧೀನದ ನಂತರ ವಿದೇಶಿ ನೆರವು ಸ್ಥಗಿತಗೊಂಡಿದೆ. ಅಂತಾರಾಷ್ಟ್ರೀಯ ನಿಧಿ ಮತ್ತು ವಿಶ್ವ ಬ್ಯಾಂಕ್ ಸಾಲ ಸ್ಥಗಿತಗೊಳಿಸಿದ್ದು ಅಫ್ಘಾನ್‌ಗೆ ದೊಡ್ಡ ಪೆಟ್ಟಾಗಿದೆ. ಯುನೈಟೆಡ್ ಸ್ಟೇಟ್ಸ್‌ನ ಕೇಂದ್ರ ಬ್ಯಾಂಕ್‌ಗೆ 9.4 ಬಿಲಿಯನ್ ಡಾಲರ್ ಮೀಸಲುಗಳನ್ನು ನಿಲ್ಲಿಸಲಾಗಿದೆ. ಅಲ್ಲದೇ ಫೈನಾನ್ಶಿಯಲ್ ಹಣಕಾಸು ಕ್ರಿಯಾ ಕಾರ್ಯಪಡೆ ತನ್ನ 39 ಸದಸ್ಯ ರಾಷ್ಟ್ರಗಳನ್ನು ತಾಲಿಬಾನ್ ಆಸ್ತಿ ನಿರ್ಬಂಧಿಸುವಂತೆ ಮನವಿ ಮಾಡಿದೆ.

ಈ ಎಲ್ಲಾ ಕಾರಣಗಳಿಂದ ಆಫ್ಘನ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸಂಬಳವಿಲ್ಲದೆ ತಾಲಿಬಾನ್ ಉಗ್ರರು ಕೆಲಸ ಮಾಡುತ್ತಿದ್ದಾರೆ. ಇತ್ತ ಅಮಾಯಕ ಆಫ್ಘನ್ನರಿಗೆ ಅನ್ನ ಆಹಾರದ ಕೊರತೆಯಾಗಿದೆ.

See also  ಅಜ್ಮೀರ ದರ್ಗಾ ಬಾಂಬ್ ಸ್ಫೋಟ: ಇಬ್ಬರಿಗೆ ಜೀವಾವಧಿ ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು