ಕಮಲ ಅರಳುವುದೇ ಕೆಸರಿನಲ್ಲಿ: ಪ್ರಧಾನಿ ಮೋದಿ

ಕಮಲ ಅರಳುವುದೇ ಕೆಸರಿನಲ್ಲಿ: ಪ್ರಧಾನಿ ಮೋದಿ

HSA   ¦    Nov 27, 2017 02:14:55 PM (IST)
ಕಮಲ ಅರಳುವುದೇ ಕೆಸರಿನಲ್ಲಿ: ಪ್ರಧಾನಿ ಮೋದಿ

ಕಛ್: ಕಾಂಗ್ರೆಸ್ ನವರು ನಡೆಸುತ್ತಿರುವ ಕೆಸರೆರೆಚಾಟಕ್ಕೆ ನಾನು ಕೃತಜ್ಞನಾಗಿದ್ದೇನೆ. ಯಾಕೆಂದರೆ ಕಮಲ ಅರಳುವುದೇ ಕೆಸರಿನಲ್ಲಿ ಎಂದು ಗುಜರಾತ್ ನಲ್ಲಿ ಚುನಾವಣಾ ಭಾಷಣವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು ತಿಳಿಸಿದರು.

ಪ್ರಧಾನಿ ಮೋದಿ ಅವರು ಇಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಕಚ್ಚೀ ಭಾಷೆಯಲ್ಲೇ ಭಾಷಣ ಮಾಡಿದರು. ಮೊದಲಿಗೆ ಆಶಾಪುರ ಮಾತಾ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸಾವರ್ಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಾನು ಮೊದಲು ಆಶಾಪುರ ದೇವಿ ಬಳಿ ಪ್ರಾರ್ಥಿಸಿ ಬಂದಿದ್ದೇನೆ. ಜನತಾ ಜನಾರ್ಧನನ ಆಶೀರ್ವಾದ ಬೇಡುತ್ತಿದ್ದೇವೆ. ಇಲ್ಲಿನ ಜನರ ಪ್ರೀತಿ ವಿಶ್ವಾಸಗಳಿಗೆ ಅಭಾರಿಯಾಗಿದ್ದೇನೆ. ಜನರೊಂದಿಗೆ ಸಂವಾದ ನಡೆಸುವುದು ಅತ್ಯಂತ ಸಂತಸ ನೀಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ ಅವರು, ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿರುವಾಗ ಗುಜರಾತ್ ಬಗ್ಗೆ ಮಲತಾಯಿ ಧೋರಣೆ ತಳೆದಿದ್ದೀರಿ. ಇದರಿಂದ ಗುಜರಾತ್ ಹಿಂದುಳಿಯಿತು. ಇದಕ್ಕೆ ನಿಮ್ಮನ್ನು ಜನರು ಎಂದಿಗೂ ಕ್ಷಮಿಸಲ್ಲ ಎಂದರು.