ಕೊರೋನ ಭೀತಿ- ಜೆಇಇ ಮೈನ್ಸ್ ಪರೀಕ್ಷೆ ಮುಂದೂಡಿಕೆ

ಕೊರೋನ ಭೀತಿ- ಜೆಇಇ ಮೈನ್ಸ್ ಪರೀಕ್ಷೆ ಮುಂದೂಡಿಕೆ

Jayashree Aryapu   ¦    May 04, 2021 04:41:59 PM (IST)
ಕೊರೋನ ಭೀತಿ- ಜೆಇಇ ಮೈನ್ಸ್ ಪರೀಕ್ಷೆ ಮುಂದೂಡಿಕೆ

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಅವರು ಮಂಗಳವಾರ ಜಂಟಿ ಪ್ರವೇಶ ಪರೀಕ್ಷೆ- ಮುಖ್ಯ (ಜೆಇಇ ಮೈನ್ಸ್ ) - ಮೇ 2021 ರ ಅಧಿವೇಶನವನ್ನ ಮುಂದೂಡಲಾಗಿದೆ ಎಂದು ಘೋಷಿಸಿದ್ದಾರೆ.

ಹೆಚ್ಚಿನ ನವೀಕರಣಗಳಿಗಾಗಿ ಎನ್ ಟಿಎಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಪೊಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ, ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಜೆಇಇ- ಮುಖ್ಯ ಏಪ್ರಿಲ್ ಅಧಿವೇಶನವನ್ನು ಮುಂದೂಡಲಾಗಿತ್ತು. ಪರಿಷ್ಕೃತ ದಿನಾಂಕಗಳು ಪರೀಕ್ಷೆಗೆ ಕನಿಷ್ಠ 15 ದಿನಗಳ ಮೊದಲು ಇರುತ್ತವೆ ಎಂದು ನೋಷನ್ ಟೆಸ್ಟಿಂಗ್ ಏಜೆನ್ಸಿ ಹೇಳಿದೆ.

ಮೊದಲ ಎರಡು ಸೆಷನ್ʼಗಳು ಈಗಾಗಲೇ ಫೆಬ್ರವರಿ ಮತ್ತು ಮಾರ್ಚ್ʼನಲ್ಲಿ ಪೂರ್ಣಗೊಂಡಿವೆ. ಪರೀಕ್ಷೆಗಳಿಗೆ ಸಂಬಂಧಿಸಿದ ಇತ್ತೀಚಿನ ನವೀಕರಣಗಳಿಗಾಗಿ ಅಧಿಕೃತ ಎನ್ ಟಿಎ ವೆಬ್ ಸೈಟ್ (www.nta.ac.in) ಮತ್ತು (https://jeemain.nta.nic.in/) ಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.