ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ: ಎಚ್ಚರಿಕೆ ನೀಡಿದ ಅಧಿಕಾರಿಗಳು!

ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ: ಎಚ್ಚರಿಕೆ ನೀಡಿದ ಅಧಿಕಾರಿಗಳು!

Mar 13, 2017 01:00:46 PM (IST)

ಶಿಮ್ಲಾ: ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವಡೆ ಭಾರೀ ಹಿಮಪಾತವಾಗುತ್ತಿದ್ದು, ಹಿಮಪಾತವಾಗುವ ಕುರಿತು ಅಧಿಕಾರಿಗಳು ಸೋಮವಾರ ಎಚ್ಚರಿಕೆ ನೀಡಿದ್ದಾರೆ.

ಶಿಮ್ಲಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಾದ ಕಂಗ್ರಾ ಮತ್ತು ಸಿರ್ಮೌರ್ ನ ಛುರ್ಧಾರ್, ಧೌಲಧಾರ್ ನಲ್ಲಿ ಭಾರೀ ಹಿಮಪಾತವಾಗುತ್ತಿದೆ. ಭಾರೀ ಹಿಮಪಾತದಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಶಿಮ್ಲಾ, ಕುಲ್ಲು ಜಿಲ್ಲೆಗಳು ಮತ್ತು ಬುಡಕಟ್ಟು ಜನಾಂಗದವರ ಪ್ರದೇಶಗಳಲ್ಲಿರುವ 50 ರಸ್ತೆಗಳು ಬಂದ್ ಆಗಿವೆ. ಹಲವೆಡೆ ವಿದ್ಯುತ್ ಸೇವೆ ಹಾಗೂ ಮೊಬೈಲ್ ನೆಟ್ ವರ್ಕ್ ಸೇವೆಗಳೂ ಕೂಡ ಕಡಿತಗೊಂಡಿರುವುದಾಗಿ ವರದಿಗಳು ತಿಳಿಸಿವೆ.