ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

May 31, 2016 03:12:34 PM (IST)

ಕೋಲ್ಕತ್ತಾ: ಯುವತಿಯೊಬ್ಬಳನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರಗೈದ ಘಟನೆ ಕೋಲ್ಕತ್ತಾದ ಜನನಿಭಿಡ ಪ್ರದೇಶವಾದ ಸಾಲ್ಟ್ ಲೇಕ್ ಬಳಿ ನಡೆದಿದೆ.

ನಗರಕ್ಕೆ ಇತ್ತೀಚೆಗಷ್ಟೇ ಆಗಮಿಸಿದ್ದ ಯುವತಿ ಈಶಾನ್ಯ ಕೋಲ್ಕತಾದ ಬಗ್ವತಿ ಪ್ರದೇಶದಲ್ಲಿ  ಉಳಿದುಕೊಂಡಿದ್ದಳು. ಸ್ಥಳೀಯ ರೆಸ್ಟೋರೆಂಟ್ ಗೆ ಹೋಗಿದ್ದ ಯುವತಿಗೆ ಅಲ್ಲಿಂದ ವಾಪಸ್ ಆಗಲು ದಾರಿ ತೋಚದೇ ಸಾಲ್ಟ್ ಲೇಕ್ ಬಳಿ ಕಾರಿನ ಬಳಿ ನಿಂತಿದ್ದ ಈ ಮೂವರನ್ನು ದಾರಿ  ಕೇಳಿದ್ದಾಳೆ. ಇದನ್ನೇ ನೆಪಮಾಡಿಕೊಂಡ ದುಷ್ಕರ್ಮಿಗಳು ಆಕೆಯನ್ನು ಡ್ರಾಪ್ ಮಾಡುವುದಾಗಿ ಹೇಳಿ ಕಾರಿಗೆ ಹತ್ತಿಸಿಕೊಂಡು ಚಲಿಸುತ್ತಿದ್ದ ಕಾರಿನಲ್ಲೇ ಸಾಮೂಹಿಕವಾಗಿ ಅತ್ಯಾಚಾರ  ಮಾಡಿದ್ದಾರೆ.  ನಂತರ ಆಕೆಯನ್ನು ಬಿಟ್ಟು ಪರಾರಿಯಾಗಿದ್ದು, ಸ್ಥಳೀಯರು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೆಕ್ಷನ್ 376 ಜಿ  (ಸಾಮೂಹಿಕ ಅತ್ಯಾರದ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬಿಢಾ ನಗರ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.