ಪುಣೆಯಲ್ಲಿ ತಿಂಗಳಿಗೆ 400ಕ್ಕೂ ಹೆಚ್ಚು ಸಾವು: ಮೇಯರ್ ಸ್ಫೋಟಕ ಮಾಹಿತಿ

ಪುಣೆಯಲ್ಲಿ ತಿಂಗಳಿಗೆ 400ಕ್ಕೂ ಹೆಚ್ಚು ಸಾವು: ಮೇಯರ್ ಸ್ಫೋಟಕ ಮಾಹಿತಿ

HSA   ¦    Aug 01, 2020 03:13:11 PM (IST)
ಪುಣೆಯಲ್ಲಿ ತಿಂಗಳಿಗೆ 400ಕ್ಕೂ ಹೆಚ್ಚು ಸಾವು: ಮೇಯರ್ ಸ್ಫೋಟಕ ಮಾಹಿತಿ

ಪುಣೆ: ಜುಲೈ ತಿಂಗಳಲ್ಲಿ ಸುಮಾರು 400 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಇದು ದಾಖಲಾಗಿಲ್ಲವೆಂದು ಪುಣೆಯ ಮೇಯರ್ ಮುರಳೀಧರ್ ಮೊಹೊಲ್ ಸ್ಫೋಟಕ ಮಾಹಿತಿ ನೀಡಿರುವರು.

ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರನ್ನು ಇಂದು ಭೇಟಿ ಮಾಡಿದ ಮೊಹೊಲ್ ಅವರು ಈ ವಿಚಾರದ ಬಗ್ಗೆ ಗಮನ ಸೆಳೆದಿದ್ದಾರೆ.

ಕೊರೋನಾ ವೈರಸ್ ನಿಂದಾಗಿ ಪ್ರತೀ ತಿಂಗಳು ನಗರದಲ್ಲಿ 400-500 ಸಾವು ಸಂಭವಿಸುತ್ತಿದೆ ಮತ್ತು ಇದನ್ನು ದಾಖಲಿಸಲಾಗುತ್ತಿಲ್ಲ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಇದು ನಡೆಯುತ್ತಿದೆ ಎಂದು ಅವರು ಹೇಳಿದರು.