ದಕ್ಷಿಣ ಆಫ್ರಿಕಾದ ಪ್ರಜೆಗಳ ಸುರಕ್ಷತೆಗೆ ಸರ್ಕಾರ ಬದ್ದ: ಸುಷ್ಮಾ ಸ್ವರಾಜ್

ದಕ್ಷಿಣ ಆಫ್ರಿಕಾದ ಪ್ರಜೆಗಳ ಸುರಕ್ಷತೆಗೆ ಸರ್ಕಾರ ಬದ್ದ: ಸುಷ್ಮಾ ಸ್ವರಾಜ್

May 25, 2016 07:18:55 PM (IST)

ಹೊಸದಿಲ್ಲಿ: ಭಾರತದಲ್ಲಿ ದಕ್ಷಿಣ ಆಫ್ರಿಕಾದ ಪ್ರಜೆಗಳ ಸುರಕ್ಷತೆಗೆ ಸರ್ಕಾರ ಬದ್ದವಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಹೇಳಿದ್ದಾರೆ.

ಮೇ 20ರಂದು ದೆಹಲಿಯ ದಕ್ಷಿಣ ಭಾಗದಲ್ಲಿ ಆಪ್ರಿಕಾದ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸುಷ್ಮಾ ಸ್ವರಾಜ್ ಆಫ್ರಿಕಾ ಪ್ರಜೆಗಳ ಸುರಕ್ಷತೆಗೆ ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ.  ದೆಹಲಿಗೆ ಆಗಮಿಸಿರುವ ಆಫ್ರಿಕಾ ದೇಶದ ಅಧಿಕಾರಿಗಳನ್ನು ಭೇಟಿಯಾಗಿ ಆಫ್ರಿಕಾ ಪ್ರಜೆಗಳಿಗೆ ಸುರಕ್ಷತೆ ಮತ್ತು ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿ ಎಂದು ಸಹದ್ಯೋಗಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ಭಾರತದಲ್ಲಿರುವ ಆಫ್ರಿಕನ್ ಪ್ರಜೆಗಳನ್ನು ಭೇಟಿ ನೀಡಿ ಅವರಿಗೆ ಸೂಕ್ತ ಭದ್ರತೆ ನೀಡುವುದರ ಬಗ್ಗೆ ಭರವಸೆ ನೀಡಲಾಗುವುದು ಎಂದರು.