ಬಿಜೆಪಿ ಜತೆಗಿನ ಎಲ್ಲಾ ಸಂಬಂಧ ಕಡಿದುಕೊಂಡ ಯಶವಂತ್ ಸಿನ್ಹಾ

ಬಿಜೆಪಿ ಜತೆಗಿನ ಎಲ್ಲಾ ಸಂಬಂಧ ಕಡಿದುಕೊಂಡ ಯಶವಂತ್ ಸಿನ್ಹಾ

HSA   ¦    Apr 21, 2018 03:09:01 PM (IST)
ಬಿಜೆಪಿ ಜತೆಗಿನ ಎಲ್ಲಾ ಸಂಬಂಧ ಕಡಿದುಕೊಂಡ ಯಶವಂತ್ ಸಿನ್ಹಾ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಬಿಜೆಪಿಯೊಂದಿಗಿನ ಎಲ್ಲಾ ಸಂಬಂಧ ಕಡಿದುಕೊಂಡಿದ್ದು, ಪಕ್ಷ ರಾಜಕೀಯದಿಂದ ಸಂಪೂರ್ಣವಾಗಿ ಸನ್ಯಾಸ ಸ್ವೀಕರಿಸುವುದಾಗಿ ಅವರು ಶನಿವಾರ ತಿಳಿಸಿದರು.

ಬಿಹಾರದ ಪಟ್ನಾದಲ್ಲಿ ರಾಷ್ಟ್ರಮಂಚ್ ಕಾರ್ಯಕ್ರಮದಲ್ಲಿ ಭಾಗಹಿಸಲು ತೆರಳುತ್ತಿದ್ದ ವೇಳೆ ಅವರು ಈ ಘೋಷಣೆ ಮಾಡಿದರು.

ಬಿಜೆಪಿಯೊಂದಿಗೆ ದೀರ್ಘಕಾಲದ ಸಂಬಂಧ ಕಡಿದುಕೊಳ್ಳುತ್ತಿದ್ದೇನೆಂದು ನಾನು ಈ ವೇದಿಕೆಯಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಳಿದರು.

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅವರು ಟೀಕಿಸಿದರು. ಕಳೆದ ಕೆಲವು ಸಮಯದಿಂದ ದೇಶದ ಪ್ರಜಾಪ್ರಭುತ್ವ ಭೀತಿಯಲ್ಲಿದೆ. ಪ್ರಜಾಪ್ರಭುತ್ವ ಉಳಿಸಲು ದೇಶದಾದ್ಯಂತ ಅಭಿಯಾನ ನಡೆಸುವುದಾಗಿ ಅವರು ತಿಳಿಸಿದರು.