ಇಂಡಿಯನ್ ಮುಜಾಹಿದ್ದೀನ್​ನ ಪ್ರಮುಖ ಉಗ್ರನ ಬಂಧನ

ಇಂಡಿಯನ್ ಮುಜಾಹಿದ್ದೀನ್​ನ ಪ್ರಮುಖ ಉಗ್ರನ ಬಂಧನ

May 20, 2016 04:20:44 PM (IST)

ಹೊಸದಿಲ್ಲಿ: ಕುಖ್ಯಾತ ಭಯೋತ್ಪಾದನಾ ಸಂಘಟನೆ ಇಂಡಿಯನ್ ಮುಜಾಹಿದ್ದೀನ್​ನ ಪ್ರಮುಖ ಉಗ್ರ ಅಬ್ದುಲ್ ವಾಹಿದ್ ಸಿದ್ದಿಬಾಪನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ.

ಮೂಲತಃ ಕರ್ನಾಟಕದ ಭಟ್ಕಳ ಮೂಲದವನಾದ ಅಬ್ದುಲ್ ವಾಹಿದ್ ವೃತ್ತಿಯಲ್ಲಿ ಸುಗಂಧ ವ್ಯಾಪಾರಿಯಾಗಿದ್ದು, ಕುಖ್ಯಾತ ಭಯೋತ್ಪಾದಕ ಯಾಸಿನ್ ಭಟ್ಕಳ್ ನೊಂದಿಗೆ ನಿಕಟ ಸಂಪರ್ಕ  ಹೊಂದಿದ್ದ ಎಂದು ತಿಳಿದುಬಂದಿದೆ. 2008ರಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಆರಂಭವಾದಾಗ ಸಂಘಟನೆ ಸೇರಿದ್ದ ಈತ ಬಳಿಕ ದುಬೈಗೆ ಹಾರಿದ್ದ. ದುಬೈನಲ್ಲಿ ಭೂಗತನಾಗಿ  ಅಲ್ಲಿಂದಲೇ ಭಯೋತ್ಪಾದನಾ ಚಟುವಟಿಕೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ.  ದೇಶ ತೊರೆದು ಭಯೋತ್ಪಾದಕ ಚಟುವಟಿಕೆಗಳಲ್ಲಿ ನಿರತನಾಗಿರುವ ಈತ ಇಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ. ಈತ ಭಾರತದಲ್ಲಿ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಪೊಲೀಸರು ಈತನ ಹುಡುಕಾಟದಲ್ಲಿದ್ದರು.